ಗವಾಸ್ಕರ್ ಟೆಸ್ಟ್: 3ನೇ ಟೆಸ್ಟ್ಗೆ ವ್ಯಾಟ್ಸನ್ ಸೇರಿ 3ವರಿಗೆ ಕೋಕ್
ಮೊಹಾಲಿ: ಬಾರ್ಡ್ರ್ ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಭಾರತದ ವಿರುದ್ಧ ಕಳಪೆ ಪ್ರದರ್ಶನ ತೋರಿರುವ ಹಿನ್ನೆಲೆಯಲ್ಲಿ ಮುಂಬರುವ 3ನೇ ಟೆಸ್ಟ್ ಪಂದ್ಯಕ್ಕೆ ತಂಡದ ಉಪನಾಯಕ ಶೇನ್ ವ್ಯಾಟ್ಸ್ನ್ ಸೇರಿದಂತೆ ಇತರ ಮೂರು ಆಟಗಾರರನ್ನು ಕೈಬಿಡಲಾಗಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಸೋಮವಾರ ತಿಳಿಸಿದೆ.
ಕಳೆದ ಎರಡು ಟೆಸ್ಟ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಲು ವಿಫಲವಾಗಿರುವುದರಿಂದ ಈ ನಾಲ್ಕು ಆಟಗಾರರನ್ನು ಕೈ ಬಿಡಲು ಮಂಡಳಿಯ ಸದಸ್ಯರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ತಿಳಿಸಿದೆ.
ತಂಡದ ವ್ಯವಸ್ಥಾಪಕ ಗಾವಿನ್ ಡೋವಿ 3ನೇ ಟೆಸ್ಟ್ಗೆ ತಂಡವನ್ನು ಪ್ರಕಟಿಸಿದ್ದು, ಉಪನಾಯಕ ವ್ಯಾಟ್ಸ್ನ್, ಜೆಮ್ಸ್ ಪ್ಯಾಟಿಸನ್, ಮಿಚೆಲ್ ಜಾನ್ಸನ್, ಯುವಿ ಬ್ಯಾಟ್ಸ್ಮನ್ ಉಸುಮಾನ್ ಖ್ವಾಜಾ ತಂಡದಿಂದ ಕೈಬಿಡಲಾಗಿದೆ ಎಂದು ಹೇಳಿದರು.
ಭಾರತದ ವಿರುದ್ಧದ 3ನೇ ಟೆಸ್ಟ್ ಪಂದ್ಯಕ್ಕೆ ತಂಡವನ್ನು ಪ್ರಕಟಿಸಲಾಗಿದ್ದು, ತಂಡದಲ್ಲಿನ ಪ್ರಮುಖ ವೇಗದ ಬೌಲರ್ ಪ್ಯಾಟಿಸನ್ ಬದಲಾಗಿ ಹೊಸಬರಿಗೆ ಆದ್ಯತೆ ನೀಡಲಾಗಿದೆ ಎಂದು ತಂಡದ ಕೋಚ್ ಮಿಕೆ ಆತುರ್ ತಿಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.