ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಅತ್ಯಾಚಾರ ವಿರೋಧಿ ಮಸೂದೆ ಮತ್ತಷ್ಟು ವಿಳಂಬ ಸಾಧ್ಯತೆ

ಅತ್ಯಾಚಾರ ವಿರೋಧಿ ಮಸೂದೆ ಬಗ್ಗೆ ಕೇಂದ್ರ ಸಂಪುಟದಲ್ಲೇ ಮಂಗಳವಾರ ಭಿನ್ನಾಭಿಪ್ರಾಯ ವ್ಯಕ್ತವಾಗಿದ್ದು, ಮಸೂದೆಯನ್ನು ಪರಿಶೀಲನೆಗಾಗಿ ಸಚಿವರ ತಂಡಕ್ಕೆ ..

Lingaraj Badiger
Updated On : 12 Mar 2013, 11:42 am

ನವದೆಹಲಿ: ಅತ್ಯಾಚಾರ ವಿರೋಧಿ ಮಸೂದೆ ಬಗ್ಗೆ ಕೇಂದ್ರ ಸಂಪುಟದಲ್ಲೇ ಮಂಗಳವಾರ ಭಿನ್ನಾಭಿಪ್ರಾಯ ವ್ಯಕ್ತವಾಗಿದ್ದು, ಮಸೂದೆಯನ್ನು ಪರಿಶೀಲನೆಗಾಗಿ ಸಚಿವರ ತಂಡಕ್ಕೆ ಕಳುಹಿಸಿಕೊಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅತ್ಯಾಚಾರಿಗಳಿಗೆ ಜೀವಿತಾವಧಿ ಶಿಕ್ಷೆ ವಿಧಿಸುವ ಹಾಗೂ ಸಮ್ಮತಿ ಲೈಂಗಿಕತೆಯ ವಯೋವುತಿಯನ್ನು 16ಕ್ಕೆ ಇಳಿಸುವ ಸಂಬಂಧ ಕಾನೂನು ತಿದ್ದುಪಡಿ ಮಸೂದೆ ಕುರಿತು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಕಾನೂನು ಮತ್ತು ಗೃಹ ಇಲಾಖೆ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ. ಹೀಗಾಗಿ ಅತ್ಯಾಚಾರ ವಿರೋಧಿ ಮಸೂದೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.
ಅತ್ಯಾಚಾರ ವಿರೋಧಿ ಮಸೂದೆಯಲ್ಲಿ ಅತ್ಯಾಚಾರ ಬದಲು ಲೈಂಗಿಕ ಹಲ್ಲೆ ಪದ ಸೇರಿಸುವ ಬಗ್ಗೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಸಚಿವ ಸಂಪುಟ ಯಾವುದೇ ನಿರ್ಧಾರ ಕೈಗೊಳ್ಳದೆ ಮಸೂದೆಯನ್ನು ಸಚಿವರ ತಂಡಕ್ಕೆ ಕಳುಹಿಸಲು ನಿರ್ಧರಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement