ರಾಮ್‌ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ: ವರದಿ
ನವದೆಹಲಿ: ದೆಹಲಿ ಗ್ಯಾಂಗ್‌ರೇಪ್ ಪ್ರಕರಣದ ಪ್ರಮುಖ ಆರೋಪಿ ರಾಮ್‌ಸಿಂಗ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮಂಗಳವಾರ ಪ್ರಾಥಮಿಕ ಮರಣೋತ್ತರ ವರದಿಯಿಂದ ತಿಳಿದು ಬಂದಿದೆ.
ರಾಮ್‌ಸಿಂಗ್ ಅವರ ದೇಹದ ಮೇಲೆ ಯಾವುದೇ ಗಾಯಗಳು ಪತ್ತೆಯಾಗಿಲ್ಲ. ಆತ ಬೆಳಗಿನ ಜಾವ 4.30ರಿಂದ 4.45ರ ಒಳಗೆ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಮರಣೋತ್ತರ ವರದಿ ಹೇಳಿದೆ.
ರಾಮ್‌ಸಿಂಗ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದರೆ ಆತನೇ ನೇಣು ಬಿಗಿದುಕೊಂಡನೆ ಅಥವಾ ಬೇರೆಯವರು ಆತನಿಗೆ ನೇಣು ಹಾಕಿದರೇ ಎಂಬುದರ ಬಗ್ಗೆ ವರದಿಯಲ್ಲಿ ಯಾವುದೇ ಸ್ಪಷ್ಟನೆ ಇಲ್ಲ.
ಈ ಮಧ್ಯೆ, ವಕೀಲ ಮನೋಜ್ ತೊಮರ್ ಅವರು, ರಾಮ್‌ಸಿಂಗ್ ಮೃತ ದೇಹವನ್ನು ನಾನು ನೋಡಿದ್ದು, ದೇಹದ ಕುತ್ತಿಗೆಯ ಬಲ ಭಾಗದಲ್ಲಿ ಗಾಯಗಳಿದ್ದವು ಮತ್ತು ದೇಹದ ಮೇಲೆ ಕೆಲವು ಮಾರ್ಕ್‌ಗಳಿದ್ದವು ಎಂದಿದ್ದಾರೆ. ಅಲ್ಲದೆ ರಾಮ್‌ಸಿಂಗ್ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ಅವರು ಹೇಳಿದ್ದಾರೆ.
ಡಿ.16ರಂದು 23 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಆಕೆಯ ದುರಂತ ಸಾವಿಗೆ ಕಾರಣರಾದವರಲ್ಲಿ ಒಬ್ಬನಾದ ರಾಮ್‌ಸಿಂಗ್ ನಿನ್ನೆ ತಿಹಾರ್ ಜೈಲಿನ ತನ್ನ ಸೆಲ್‌ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದ.