ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಪಾಕ್‌ನೊಂದಿಗೆ ಮಾತಕತೆ ನಿಲ್ಲಿಸಿ: ಜೇಟ್ಲಿ

ಸಂಸತ್ ದಾಳಿಯ ಅಪರಾಧಿ ಅಫ್ಜಲ್‌ಗುರುವನ್ನು ಗಲ್ಲಿಗೇರಿಸಿದ ಭಾರತದ ಕ್ರಮವನ್ನು ಖಂಡಿಸಿ ನಿರ್ಣಯ ಮಂಡಿಸಿದ ಪಾಕಿಸ್ತಾನ ಸಂಸತ್‌ನ..

Lingaraj Badiger
Updated On : 15 Mar 2013, 12:26 pm

ನವದೆಹಲಿ: ಸಂಸತ್ ದಾಳಿಯ ಅಪರಾಧಿ ಅಫ್ಜಲ್‌ಗುರುವನ್ನು ಗಲ್ಲಿಗೇರಿಸಿದ ಭಾರತದ ಕ್ರಮವನ್ನು ಖಂಡಿಸಿ ನಿರ್ಣಯ ಮಂಡಿಸಿದ ಪಾಕಿಸ್ತಾನ ಸಂಸತ್‌ನ ಉದ್ಧಟತನವನ್ನು ಪ್ರತಿಪಕ್ಷಗಳು ಶುಕ್ರವಾರ ತೀವ್ರವಾಗಿ ಖಂಡಿಸಿವೆ. ಅಲ್ಲದೆ ಭಾರತದ ಆಂತರಿಕ ವ್ಯವಹಾರಗಳಲ್ಲಿ ಪಾಕಿಸ್ತಾನ ಅನಗತ್ಯವಾಗಿ ತಲೆ ಹಾಕುತ್ತಿದೆ ಎಂದು ಆರೋಪಿಸಿವೆ.

ಇಂದು ರಾಜ್ಯಸಭೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿದ ರಾಜ್ಯಸಭೆ ಪ್ರತಿಪಕ್ಷ ನಾಯಕ ಅರುಣ್ ಜೇಟ್ಲಿ ಅವರು, ಪಾಕ್‌ನೊಂದಿಗಿನ ಎಲ್ಲ ಮಾತುಕತೆಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

'ಪಾಕಿಸ್ತಾನ ಎಲ್ಲೇ ಮೀರಿ ವರ್ತಿಸುತ್ತಿದೆ. ಹೀಗಾಗಿ ಆ ದೇಶದೊಂದಿಗಿನ ದ್ವಿಪಕ್ಷಿಯ ಮಾತುಕತೆಯ ನಿಯಮಗಳನ್ನು ಪರಿಷ್ಕರಿಸಬೇಕು ಮತ್ತು ಈ ಕೂಡಲೇ ಪಾಕ್‌ನೊಂದಿಗಿನ ಎಲ್ಲ ಮಾತುಕತೆಯನ್ನು ಸ್ಥಗಿತಗೊಳಿಸಬೇಕು' ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಅಫ್ಜಲ್ ಗುರುವನ್ನು ಗಲ್ಲಿಗೇರಿಸಿರುವುದನ್ನು ಖಂಡಿಸಿ ಪಾಕ್ ಸಂಸತ್ ನಿರ್ಣಯ ಮಂಡಿಸಿರುವುದರಿಂದ, ಆ ದೇಶದೊಂದಿಗೆ ಸಂಬಂಧ ಸುಧಾರಣೆ ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕ ಜೇಟ್ಲಿ ಹೇಳಿದರು.

ಕದಡಿದ ನೀರಿನಲ್ಲಿ ಮೀನು ಹಿಡಿಯುವ ಕೆಲಸಕ್ಕೆ ಪಾಕಿಸ್ತಾನ ಮತ್ತೊಮ್ಮೆ ಕೈಹಾಕಿದೆ. ಸಂಸತ್ತಿನ ಮೇಲಿನ ದಾಳಿ ಹಿನ್ನೆಲೆಯಲ್ಲಿ ಅಫ್ಜಲ್‌ಗುರು ಗಲ್ಲಿಗೇರಿಸಿದ ಭಾರತದ ಕ್ರಮವನ್ನು ಖಂಡಿಸುವ ನಿರ್ಣಯವನ್ನು ಬುಧವಾರ ಪಾಕಿಸ್ತಾನದ ಸಂಸತ್ತಿನಲ್ಲಿ ಅಂಗೀಕರಿಸಲಾಗಿದೆ. ಈ ನಿರ್ಣಯದಲ್ಲಿ ಅಫ್ಜಲ್ ಮೃತದೇಹವನ್ನು ಕುಟುಂಬಕ್ಕೆ ಹಿಂತಿರುಗಿಸುವಂತೆ ಒತ್ತಾಯಿಸಲಾಗಿದೆ. ಈ ಮೂಲಕ ಪ್ರಕ್ಷುಬ್ದ ಕಾಶ್ಮೀರದಲ್ಲಿ ತನ್ನ ಬೇಳೆ ಬೇಯಿಸಿಕೊಳ್ಳಲು ಪಾಕಿಸ್ತಾನ ಮುಂದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement