408ಕ್ಕೆ ಆಸೀಸ್ ಆಲೌಟ್
ಭಾರತದ ವಿರುದ್ಧದ ಮೂರನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ 408ರನ್ ರನ್ ಗಳಿಸಿ ಆಲೌಟ್ ಆಗಿದೆ. ನಿನ್ನೆ ದಿನಾಂತ್ಯಕ್ಕೆ 7 ವಿಕೆಟ್ ..
ಮೊಹಾಲಿ: ಭಾರತದ ವಿರುದ್ಧದ ಮೂರನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ 408ರನ್ ರನ್ ಗಳಿಸಿ ಆಲೌಟ್ ಆಗಿದೆ. ನಿನ್ನೆ ದಿನಾಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 273ರನ್ ಗಳಿಸಿದ್ದ ಆಸೀಸ್ ಇಂದು ಎಲ್ಲ ವಿಕೆಟ್ ಕಳೆದುಕೊಂಡು ಸರ್ವಪತನವಾಗಿದೆ.
ಇಂದು ಆಟ ಮುಂದುವರೆಸಿದ ಸ್ಟೀವನ್ ಸ್ಮಿತ್ 92 ರನ್ ಹಾಗೂ ಮಿಚೆಲ್ ಸ್ಪಾರ್ಕ್ ಅವರು 99ರನ್ ಗಳಿಸಿ ಇಬ್ಬರೂ ಶತಕದಿಂದ ವಂಚಿತರಾದರು.
ಶುಕ್ರವಾರ ದಿನದಾಟದಲ್ಲಿ ಮಿಂಚಿದ್ದ ರವೀಂದ್ರ ಜಡೇಜಾ ಅವರು ಮೂರು ವಿಕೆಟ್ ಕಬಳಿಸಿದ್ದರು. ಸರಣಿಯಲ್ಲಿ ನಿಧಾನವಾಗಿ ಲಯ ಕಂಡುಕೊಳ್ಳುತ್ತಿರುವ ಇಶಾಂತ್ ಶರ್ಮಾ ಸಹ ಮೂರು ವಿಕೆಟ್ ಪಡೆದು ಆಸೀಸ್ ತಂಡವನ್ನು ಕಂಗಾಲಾಗಿಸಿದರು.