'ಕಿಕ್'ಗಾಗಿ ಸಲ್ಮಾನ್ ಭೇಟಿಯಾಗಿಲ್ಲ: ಚೇತನ್ ಭಗತ್
ಬಾಲಿವುಡ್ ನ 'ಕಿಕ್' ಚಿತ್ರಕ್ಕೆ ನಾನು ಚಿತ್ರಕಥೆ ಬರೆದಿರುವುದರಿಂದ ಚಿತ್ರದ ನಾಯಕನಾಗಿ ಅಭಿನಯಿಸಲು ಸಲ್ಮಾನ್ ಖಾನ್ ತಿರಸ್ಕರಿಸಿದ್ದಾರೆ...
ಮುಂಬೈ: ಬಾಲಿವುಡ್ನ 'ಕಿಕ್' ಚಿತ್ರಕ್ಕೆ ನಾನು ಚಿತ್ರಕಥೆ ಬರೆದಿರುವುದರಿಂದ ಚಿತ್ರದ ನಾಯಕನಾಗಿ ಅಭಿನಯಿಸಲು ಸಲ್ಮಾನ್ ಖಾನ್ ತಿರಸ್ಕರಿಸಿದ್ದಾರೆ ಎಂಬ ಸುದ್ಧಿ ತಿಳಿದು ಬೇಸರವಾಗಿದೆ ಎಂದು ಖ್ಯಾತ ಬರಹಗಾರ ಚೇತನ ಭಗತ್ ಶನಿವಾರ ಹೇಳಿದ್ದಾರೆ.
'ಕಿಕ್' ಚಿತ್ರದ ಸಂಬಂಧ ನಾನು ಸಲ್ಮಾನ್ ಖಾನ್ ಅವರನ್ನು ಭೇಟಿಯಾಗಿಲ್ಲ ಎಂದು ಚೇತನ್ ಭಗತ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಚೇತನ್, ನಾನು ಕೇವಲ ಸಾಜೀದ್ ನಾಡಿಯದ್ವಾಲಾ ಮತ್ತು ಅವರ ತಂಡದೊಂದಿಗೆ 'ಕಿಕ್' ಚಿತ್ರಕ್ಕಾಗಿ ಕೆಲಸ ನಿರ್ವಹಿಸುತ್ತಿದ್ದೇನೆ ಹೊರತು ಸಲ್ಮಾನ್ ಖಾನ್ ಅವರಿಗೂ ನನಗೂ ಸಂಬಂಧವಿಲ್ಲ ಎಂದು ಹೇಳಿದರು. ಈ ಸಂಬಂಧ ಇಲ್ಲಿವರೆಗೆ ನಾನು ಅವರನ್ನು ಸಂಪರ್ಕಿಸಿಲ್ಲ ಹಾಗೂ ನನಗೂ ಈ ವಿವಾದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದರು.
ನಾಡಿಯದ್ವಾಲಾ ನಿರ್ಮಿಸಿ, ನಿರ್ದೇಶಿಸುತ್ತಿರುವ 'ಕಿಕ್' ಚಿತ್ರದ ಚಿತ್ರೀಕರಣ ಜೂನ್ 1ರಿಂದ ಆರಂಭವಾಗಲಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.