ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಭಾರತ-ಆಸೀಸ್ ಟೆಸ್ಟ್: ವೇಗದಿ ಶತಕದ 'ಶಿಖರ್‌' ಏರಿದ ಧವನ್

ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ನಲ್ಲಿ 168 ಎಸೆತದಲ್ಲಿ 185 ರನ್‌ ಗಳಿಸುವ ಮೂಲಕ ಶಿಖರ್ ಧವನ್ ಚೊಚ್ಚಲ ಪಂದ್ಯದಲ್ಲಿ ವೇಗದ ಶತಕ ಬಾರಿಸಿದ ದಾಖಲೆ ಮಾಡಿದ್ದಾರೆ.

Parashurama
Updated On : 16 Mar 2013, 5:42 am

ಮೊಹಾಲಿ: ಮೊಹಾಲಿಯಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ 168 ಎಸೆತದಲ್ಲಿ 185 ರನ್‌ಗಳಿಸುವ ಮೂಲಕ ಶಿಖರ್ ಧವನ್ ವೇಗದ ಶತಕ ದಾಖಲಿಸಿದ್ದಾರೆ. ಭಾರತ ಟೆಸ್ಟ್ ಕ್ರಿಕೆಟ್‌ನ ಇತಿಹಾಸದಲ್ಲಿ ಮೊದಲ ಇನಿಂಗ್ಸ್‌ವೊಂದರಲ್ಲಿ ಅತೀ ವೇಗದ ಶತಕ ಬಾರಿಸಿದ ಗೌರವಕ್ಕೆ ಶಿಖರ್ ಧವನ್ ಪಾತ್ರರಾಗಿದ್ದಾರೆ.

ಆಸ್ಟ್ರೇಲಿಯಾದ 408 ರನ್‌ಗಳ ಬೃಹತ್ ಗುರಿಯ ಬೆನ್ನುಹತ್ತಿದ ಭಾರತ, ಶಿಖರ ಧವನ್ ಹಾಗೂ ಮುರಳಿ ವಿಜಯ್ ಜೊತೆಯಾಟ ಆಸೀಸ್ ಬೌಲರ್‌ಗಳಿಗೆ ಕಾಡುವಂತೆ ಮಾಡಿತು. ವಿಶೇಷವಾಗಿ ಶಿಖರ್ ಧವನ್ ಇನಿಂಗ್ಸ್ ಆರಂಭದಿಂದಲೂ ಭರ್ಜರಿಯಾಗಿ ಬ್ಯಾಟ್ ಬೀಸುತ್ತ ವೇಗವಾಗಿ ಶತಕ ದಾಖಲಿಸಿಕೊಂಡರು. ಅಲ್ಲದೇ ಆಸ್ಟ್ರೇಲಿಯಾದಂತ ಬಲಿಷ್ಠ ತಂಡದ ಎದುರು ಪ್ರಥಮ ಟೆಸ್ಟ್ ಪಂದ್ಯದಲ್ಲೇ ವೇಗದ ಶತಕ ಬಾರಿಸಿದರು.

168 ಎಸೆತಗಳಿಂದ 33 ಬೌಂಡರಿ, 2 ಸಿಕ್ಸ್‌ಗಳ ನೆರವಿನಿಂದ ಭರ್ಜರಿ ಅಜೇಯ 185ರನ್‌ಗಳನ್ನು ಪೇರಿಸುವ ಮೂಲಕ ಆಸ್ಟ್ರೇಲಿಯಾಕ್ಕೆ ತಕ್ಕ ಉತ್ತರ ನೀಡಿದ್ದಾರೆ. ಪ್ರಪಥಮವಾಗಿ ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ಪಂದ್ಯಕ್ಕೆ ವೀರೇಂದ್ರ ಸೆಹ್ವಾಗ್ ಅವರ ಸ್ಥಾನಕ್ಕೆ ಧವನ್ ಅವರನ್ನು ಆಯ್ಕೆ ಮಾಡಲಾಗಿತ್ತು. ಮೋದಲ ಪಂದ್ಯದಲ್ಲೇ ತಮ್ಮ ಸಾಮರ್ಥ್ಯವನ್ನು ಆಯ್ಕೆ ಸಮಿತಿಗೆ ತೋರಿಸಿದ್ದಾರೆ.

ಧವನ್‌ಗೆ ಸಾತ್ ನೀಡಿದ ಇನ್ನೊಬ್ಬ ಆಟಗಾರ ಮುರಳಿ ವಿಜಯ್ ಕೂಡ ತಂಡಕ್ಕೆ ಆಸರೆಯಾಗಿದ್ದು, 181 ಎಸೆತಗಳಿಂದ 83 ರನ್ ಗಳಿಸಿದ್ದಾರೆ. ದಿನದ ಅಂತ್ಯಕ್ಕೆ ಭಾರತ 283/0 ರನ್ ಗಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments