ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಹೈ ಸ್ಛೋಟ: ಇಬ್ಬರು ಐಎಂ ಕಾರ್ಯಕರ್ತರು ಎನ್‌ಐಎ ವಶಕ್ಕೆ

ಹೈದರಾಬಾದ್ ಅವಳಿ ಸ್ಫೋಟದ ಸಂಬಂಧ ಹೆಚ್ಚಿನ ವಿಚಾರಣೆಗಾಗಿ ಇಂಡಿಯನ್ ಮುಜಾಹಿದ್ದೀನ್(ಐಎಮ್) ಸಂಘಟನೆಯ ಇಬ್ಬರು ಕಾರ್ಯಕರ್ತರನ್ನು...

Parashurama
Updated On : 16 Mar 2013, 3:42 am

ನವದೆಹಲಿ: ಹೈದರಾಬಾದ್ ಅವಳಿ ಸ್ಫೋಟದ ಸಂಬಂಧ ಹೆಚ್ಚಿನ ವಿಚಾರಣೆಗಾಗಿ ಇಂಡಿಯನ್ ಮುಜಾಹಿದ್ದೀನ್(ಐಎಮ್) ಸಂಘಟನೆಯ ಇಬ್ಬರು ಕಾರ್ಯಕರ್ತರನ್ನು 4 ದಿನಗಳ ಕಾಲ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಯ ವಶಕ್ಕೆ ದೆಹಲಿ ಕೋರ್ಟ್ ಶುಕ್ರವಾರ ನೀಡಿದೆ.

ಅವಳಿ ಸ್ಫೋಟದಲ್ಲಿ ಸಂಪರ್ಕ ಹೊಂದಿದ್ದಾರೆ ಎನ್ನಲಾದ ಇಬ್ಬರು ಐಎಂ ಕಾರ್ಯಕರ್ತರಾದ ಸೈಯದ್ ಮಕ್ಬೂಲ್ ಹಾಗೂ ಇಮ್ರಾನ್ ಖಾನ್, ಓಬೇದ್-ಉರ್-ರೆಹಮಾನ್‌ನನ್ನು ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡಬೇಕು ಎಂದು ಎನ್‌ಐಎ ಕೋರ್ಟ್‌ಗೆ ಮನವಿ ಮಾಡಿತ್ತು. ಎನ್‌ಐಎ ಮನವಿಯನ್ನು ಪುರಸ್ಕರಿಸಿದ ನ್ಯಾ. ಐ.ಎಸ್.ಮೆಹ್ತಾ ಅವರಿದ್ದ ಏಕಸದಸ್ಯ ಪೀಠ, ಈ ಮೂವರನ್ನು ಮಾರ್ಚ್ 20ರವರೆಗೆ ಎನ್‌ಐಎ ವಶಕ್ಕೆ ಒಪ್ಪಿಸಿದೆ.

ಸೈಯದ್ ಮಕ್ಬೂಲ್ ಮತ್ತು ಇಮ್ರಾನ್ ತಿಹಾರ್ ಜೈಲಿನಲ್ಲಿ ಹಾಗೂ ರೆಹಮಾನ್ ಬೆಂಗಳೂರಿನ ಕೇಂದ್ರ ಕಾರಗೃಹದಲ್ಲಿದ್ದಾನೆ. ಈಗಾಗಲೇ ಅವಳಿ ಸ್ಫೋಟ ಸಂಬಂಧ ರೆಹಮಾನ್ ಮಾರ್ಚ್ 13ರವರೆಗೆ ಪೊಲೀಸರ ವಶದಲ್ಲಿದ್ದು, ಸ್ಫೋಟದ ಕುರಿತು ಇತನಿಂದ ಹೆಚ್ಚಿನ ಮಾಹಿತಿ ತಿಳಿಯಲು ರೆಹಮಾನ್ ಸೇರಿದಂತೆ ಇಬ್ಬರನ್ನು ಇನ್ನು ಕೇಲವು ದಿನಗಳು ಕಾಲ ತಮ್ಮ ಕಸ್ಟಡಿಗೆ ವಹಿಸಬೇಕೆಂದು ಎನ್‌ಐಎ ಕೋರ್ಟ್‌ಗೆ ಮನವಿ ಸಲ್ಲಿಸಿತ್ತು.

2012ರಲ್ಲಿ ಪುಣೆಯಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪದ ಮೇಲೆ ಪೊಲೀಸರು ಮಕ್ಬೂಲ್ ಮತ್ತು ಇಮ್ರಾನ್‌ನ್ನು ಬಂಧಿಸಿ, ತಿಹಾರ್ ಜೈಲಿನಲ್ಲಿರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments