ಗವಾಸ್ಕರ್ ಟೆಸ್ಟ್ :ಭಾರತಕ್ಕೆ 133ರನ್ಗಳ ಸುಲಭ ಗುರಿ
ಮೊಹಾಲಿಯಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ತನ್ನ ಕೊನೆ ಇನಿಂಗ್ಸ್ನಲ್ಲಿ ಆಸೀಸ್ 233ರನ್ಗಳಿಗೆ ಆಲೌಟ್ ಆಗುವ ಮೂಲಕ...
ಮೊಹಾಲಿ: ಮೊಹಾಲಿಯಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ತನ್ನ ಕೊನೆ ಇನಿಂಗ್ಸ್ನಲ್ಲಿ ಆಸೀಸ್ 233ರನ್ಗಳಿಗೆ ಆಲೌಟ್ ಆಗುವ ಮೂಲಕ ಭಾರತಕ್ಕೆ 133ರನ್ಗಳ ಸುಲಭ ಗುರಿ ನೀಡಿದೆ.
ಪಂದ್ಯದ ಕೊನೆ ದಿನವಾದ ಇಂದು ಆಸ್ಟ್ರೇಲಿಯಾ, ಆರಂಭದಿಂದಲೇ ಭಾರತದ ಸ್ಪೀನ್ ದಾಳಿಯನ್ನು ಸಮರ್ಥವಾಗಿ ಎದುರಿಸಲಾಗದೇ ಒಂದರ ಹಿಂದರಂತೆ ಒಂದು ವಿಕೆಟ್ ಕಳೆದುಕೊಳ್ಳಲಾರಂಭಿಸಿತು. ಈ ಹಂತದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ಕೇವಲ 133/6ಗಳಿಸಿ ಹೀನಾಯ ಸ್ಥಿತಿಯಲ್ಲಿತ್ತು.
ಭಾರತದ ರವೀಂದ್ರ ಜಡೇಜಾ, ಓಜಾ ಬೌಲಿಂಗ್ ದಾಳಿಗೆ ಆಸೀಸ್ ಬ್ಯಾಟ್ಸ್ಮನ್ಗಳು ರನ್ ತೆಗೆಯಲು ಪರದಾಡಿದರು. ಒಂದು ಹಂತದಲ್ಲಿ 179/9 ವಿಕೆಟ್ ಕಳೆದುಕೊಂಡ ಆಸ್ಟ್ರೇಲಿಯಾ ತಂಡಕ್ಕೆ ಫಿಲಿಪ್ ಹುಗ್, ಬ್ರ್ಯಾಡ್ ಹ್ಯಾಡಿನ್ ಸ್ಪಲ್ಪ ಸಮಯ ಪ್ರತಿರೊಧ ಒಡ್ಡಲು ಪ್ರಯತ್ನಿಸಿದರು. ಆದರೆ ಓಜಾ ಈ ಇಬ್ಬರ ಜೊಡಿಯನ್ನು ಬೇರ್ಪಡಿಸಲು ಯಶಸ್ವಿಯಾದರು.
ಭಾರತಕ್ಕೆ ಪಂದ್ಯ ಹಾಗೂ ಸರಣಿ ಜಯಿಸಲು ಇನ್ನು ಒಂದು ದಿನ ಬಾಕಿ ಇದ್ದು, ಭಾರತದ ಬ್ಯಾಟ್ಸ್ಮನ್ಗಳು ಸುಲಭವಾಗಿ ಪ್ರವಾಸಿ ತಂಡವನ್ನು ಮಣಿಸುವ ಹುಮ್ಮಸ್ಸಿನಲ್ಲಿದ್ದಾರೆ. ಭಾರತ ಈ ಪಂದ್ಯ ಜಯಿಸಿದರೆ ಪ್ರತಿಷ್ಠಿತ ಬಾರ್ಡ್ರ್ ಗವಾಸ್ಕರ್ ಸರಣಿ ತನ್ನ ಮಡಿಗೇರಿಸಿಕೊಳ್ಳುವುದಲ್ಲದೇ, ಆಸೀಸ್ ವಿರುದ್ಧ ಸತತ ಮೂರು ಪಂದ್ಯಗಳನ್ನು ಜಯಿಸುವ ಮೂಲಕ ಆಸ್ಟ್ರೇಲಿಯಾಕ್ಕೆ ಮುಖಭಂಗ ಉಂಟುಮಾಡಲಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.