ಬೆಂಗಳೂರಲ್ಲಿ ಮತ್ತೆ ಅಗ್ನಿ ಅವಘಡ: 23 ಬಸ್, 10 ಕಾರು ಬೆಂಕಿಗಾಹುತಿ
ಬೆಂಗಳೂರಿನಲ್ಲಿ ಸೋಮವಾರ ಮತ್ತೆ ಅಗ್ನಿ ಅವಘಡ ಸಂಭವಿಸಿದ್ದು, 23 ಮಿನಿ ಬಸ್ ಹಾಗೂ 10 ಕಾರುಗಳು ಬೆಂಕಿಗಾಹುತಿಯಾಗಿವೆ.
ಬೆಂಗಳೂರು: ಬೆಂಗಳೂರಿನಲ್ಲಿ ಸೋಮವಾರ ಮತ್ತೆ ಅಗ್ನಿ ಅವಘಡ ಸಂಭವಿಸಿದ್ದು, 23 ಮಿನಿ ಬಸ್ ಹಾಗೂ 10 ಕಾರುಗಳು ಬೆಂಕಿಗಾಹುತಿಯಾಗಿವೆ.
ನಗರದ ಮುರಗೇಶ್ಪಾಳ್ಯದ ವಿಂಡ್ಟನಲ್ ರಸ್ತೆಯಲ್ಲಿರುವ ಇನ್ಫ್ಯಾಂಟ್ ಟ್ರಾವೆಲ್ಸ್ನ ಸರ್ವೀಸ್ ಸ್ಟೇಷನ್ನಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ. ಸ್ಥಳಕ್ಕೆ ಐದು ಅಗ್ನಿ ಶಾಮಕ ವಾಹನಗಳು ದಾವಿಸಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ..