ಭಾರತದ ಮಡಿಲಿಗೆ ಟೆಸ್ಟ್ ಸರಣಿ: ಆಸೀಸ್ ವಿರುದ್ಧ 6 ವಿಕೆಟ್ಗಳ ಜಯ
ಮೊಹಾಲಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ 3ನೇ ಟೆಸ್ಟ್ ಪಂದ್ಯದಲ್ಲೂ ಭಾರತ ಭರ್ಜರಿ ಜಯಗಳಿಸುವ ಮೂಲಕ ಪ್ರತಿಷ್ಠಿತ ಬಾರ್ಡ್ರ್ ಗವಾಸ್ಕರ್ ಟೆಸ್ಟ್ ಸರಣಿಯನ್ನು...
ಮೊಹಾಲಿ: ಮೊಹಾಲಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ 3ನೇ ಟೆಸ್ಟ್ ಪಂದ್ಯದಲ್ಲೂ ಭಾರತ ಭರ್ಜರಿ ಜಯಗಳಿಸುವ ಮೂಲಕ ಪ್ರತಿಷ್ಠಿತ ಬಾರ್ಡ್ರ್ ಗವಾಸ್ಕರ್ ಟೆಸ್ಟ್ ಸರಣಿಯನ್ನು ಕೈ ವಶಮಾಡಿಕೊಂಡಿದೆ.
ಆಸೀಸ್ ವಿರುದ್ಧದ 3ನೇ ಪಂದ್ಯದಲ್ಲೂ 6 ವಿಕೆಟ್ಗಳ ಅಂತರದಿಂದ ಜಯಸಾಧಿಸಿರುವ ಧೋನಿ ಪಡೆ, 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 3-0 ಮುನ್ನಡೆ ಸಾಧಿಸಿದೆ.
ಆಸೀಸ್ನ 133ರನ್ಗಳ ಸಾಧಾರಣಾ ಗುರಿಯ ಬೆನ್ನುಹತ್ತಿದ ಭಾರತ, ಮುರಳಿ ವಿಜಯ್ ಹಾಗೂ ಚೇತೇಶ್ವರ್ ಪೂಜಾರ್ ಅವರು ಹ್ಯಾಟ್ರಿಕ್ ಜಯದ ಹಾದಿಯನ್ನು ಸುಗಮಗೊಳಿಸಿದರು. ಈ ಇಬ್ಬರು ಆಟಗಾರರು 30ರನ್ಗಳ ಜೊತೆಯಾಟ ಟೀಂ ಇಂಡಿಯಾದ ಗೆಲುವಿಗೆ ಪ್ರಮುಖ ಪಾತ್ರವಹಿಸಿತು.
ಆಸ್ಟ್ರೇಲಿಯಾದ 408ರನ್ಗಳ ಬೃಹತ್ ಗುರಿಯನ್ನಟ್ಟಿದ ಭಾರತ ಮೊದಲ ಇನಿಂಗ್ಸ್ನಲ್ಲಿ 499/10ರನ್ಗಳನ್ನು ಪೇರಿಸುವ ಮೂಲಕ 97ರನ್ಗಳ ಇನಿಂಗ್ಸ್ ಮುನ್ನಡೆಯನ್ನು ಸಾಧಿಸಿತ್ತು. ಎರಡನೇ ಇನಿಂಗ್ಸ್ ಆರಂಭಿಸಿದ ಭಾರತ ಸ್ವೀನ್ ದಾಳಿಯನ್ನು ಎದುರಿಸಲಾಗದೆ 233ರನ್ಗಳಿಗೆ ಆಲೌಟ್ಆಗಿತ್ತು. ಭಾರತದ ಪರ ಶಿಖರ್ ಧವನ್ ಪಂದ್ಯ ಶೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸ್ಕೋರ್ ವಿವರ
ಬ್ಯಾಟಿಂಗ್: ಮುರಳಿ ವಿಜಯ್ 26, ಚೇತೇಶ್ವರ್ ಪೂಜಾರ್ 28, ಕೋಹ್ಲಿ 34ರನ್ ಪೇರಿಸಿದ್ದಾರೆ.
ಬೌಲಿಂಗ್: ಬಿ ಕುಮಾರ್ 3, ಆರ್.ಅಶ್ವೀನ್ 2, ರವೀಂದ್ರ ಜಡೇಜಾ 3, ಓಜಾ 2 ವಿಕೆಟ್ಗಳನ್ನು ಪಡೆದಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.