ಚುನಾವಣೆಗೆ ನಾವು ಸಿದ್ಧ: ಬಿಜೆಪಿ
ನವದೆಹಲಿ: ಡಿಎಂಕೆ, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಿಂದ ಮಂಗಳವಾರ ಹೊರ ಬರುತ್ತಿದ್ದಂತೆ ಸಾರ್ವತ್ರಿಕ ಚುನಾವಣೆಗೆ ತಾನು ಸಿದ್ಧವಿರುವುದಾಗಿ ಭಾರತೀಯ ಜನತಾ ಪಕ್ಷ(ಬಿಜೆಪಿ) ಹೇಳಿದೆ.
'ನಾವು ಸದಾ ಚುನಾವಣೆಗೆ ಸಿದ್ಧರಿದ್ದೇವೆ. ಯುಪಿಎ ಸರ್ಕಾರ ಬಹುಮತ ಕಳೆದುಕೊಂಡಿದೆ. ಈ ಸರ್ಕಾರ ತೊಲಗಬೇಕು' ಎಂದು ಬಿಜೆಪಿ ಉಪಾಧ್ಯಕ್ಷ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಹೇಳಿದ್ದಾರೆ.
ಶ್ರೀಲಂಕಾದಲ್ಲಿ ತಮಿಳರ ಹತ್ಯೆ ಪ್ರಕರಣ ಸಂಬಂಧ ಡಿಎಂಕೆ ಬೆಂಬಲ ವಾಪಸ್ ಪಡೆದ ಬಗ್ಗೆ ಸಂಸತ್ತಿನ ಹೊರಗಡೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ನಖ್ವಿ, ಕೇಂದ್ರ ಸರ್ಕಾರ ಕೃತಕ ಉಸಿರಾಟದಲ್ಲಿದೆ. ಆದರೂ ಹೇಗಾದರು ಮಾಡಿ ಸರ್ಕಾರ ಉಳಿಸಿಕೊಂಡರೆ, ಅದು ದೇಶದ ಹಿತಾಸಕ್ತಿಗೆ ಮಾರಕ ಎಂದರು.