ನದಿಗೆ ಉರುಳಿದ ಬಸ್, 37 ಸಾವು
ಮುಂಬೈ ಮೂಲದ ಖಾಸಗಿ ಬಸ್ವೊಂದು ನದಿಗೆ ಉರುಳಿದ ಪರಿಣಾಮ 37 ಜನರು ಸಾವನ್ನಪ್ಪಿರುವ ಘಟನೆ ರತ್ನಗಿರಿ ಜಿಲ್ಲೆಯಲ್ಲಿ ಮಂಗಳವಾರ..
ಮಹಾರಾಷ್ಟ್ರ, ರತ್ನಗಿರಿ: ಮುಂಬೈ ಮೂಲದ ಖಾಸಗಿ ಬಸ್ವೊಂದು ನದಿಗೆ ಉರುಳಿದ ಪರಿಣಾಮ 37 ಜನರು ಸಾವನ್ನಪ್ಪಿರುವ ಘಟನೆ ರತ್ನಗಿರಿ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.
ಗೋವಾದಿಂದ ಮುಂಬೈಗೆ ಹೊರಟಿದ್ದ್ದ ಮಹಾಕಾಳಿ ಟ್ರಾವೆಲ್ಸ್ನ ಬಸ್ಸು, ರತ್ನಗಿರಿಯ ಕೆಹದ್ ತಾಲ್ಲೂಕಿನಲ್ಲಿರುವ ಜಗಾಬುಡಿ ನದಿಗೆ ಉರುಳಿ 37 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಮತ್ತು 14 ಜನ ಗಾಯಗೊಂಡಿದ್ದಾರೆ.
ಮುಂಬೈಗೆ ತೆರಳುತ್ತಿದ್ದ ಮಹಾಕಾಳಿ ಟ್ರಾವೆಲ್ಸ್ಗೆ ಸೇರಿದ ಬಸ್ನ ಚಾಲಕ ಇಂದು ಬೆಳಿಗ್ಗೆ 3.30ರ ಸುಮಾರಿಗೆ ನಿದ್ರೆಗೆ ಜಾರಿದ ಹಿನ್ನಲೆಯಲ್ಲಿ ಈ ಅವಘಡ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.
ಗಾಯಗೊಂಡವರಲ್ಲಿ 13 ಜನ ಭಾರತೀಯರಾಗಿದ್ದು, ಓರ್ವ ರಷ್ಯಾ ಮಹಿಳೆಯಾಗಿದ್ದಾರೆ.
ಬಸ್ ಚಾಲಕ ಸೇರಿದಂತೆ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕ್ರೇನ್ಗಳ ಸಹಾಯದಿಂದ ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.