ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಬೆನಿ ಪ್ರಸಾದ್ ಕಾಂಗ್ರೆಸ್‌ಗೆ ಗುಡ್‌ಬೈ?

ಕೇಂದ್ರ ಸಚಿವ ಬೆನಿ ಪ್ರಸಾದ್ ಕಾಂಗ್ರೆಸ್‌ಗೆ ಗುಡ್‌ಬೈ ಹೇಳ್ತಾರಾ? ಹೀಗೊಂದು ಸುದ್ದಿ ರಾಜಕೀಯ ವಲಯದಲ್ಲಿ ಹಬ್ಬಿದೆ. ಮಂಗಳವಾರ...

Rashmi Kasaragodu
Updated On : 19 Mar 2013, 3:13 am

ನವದೆಹಲಿ:  ಕೇಂದ್ರ ಸಚಿವ ಬೆನಿ ಪ್ರಸಾದ್ ಕಾಂಗ್ರೆಸ್‌ಗೆ ಗುಡ್‌ಬೈ ಹೇಳ್ತಾರಾ? ಹೀಗೊಂದು ಸುದ್ದಿ ರಾಜಕೀಯ ವಲಯದಲ್ಲಿ ಹಬ್ಬಿದೆ. ಮಂಗಳವಾರ ನಡೆದ ಕಾಂಗ್ರೆಸ್‌ನ ಸಂಸದೀಯ ಸಭೆಗೆ ಬೆನಿ ಪ್ರಸಾದ್ ಗೈರು ಹಾಜರಾಗಿರುವುದೇ ಈ ಸುದ್ದಿ ಹಬ್ಬಲು ಕಾರಣವಾಗಿದೆ.

ಮುಲಾಯಂ ಸಿಂಗ್ ಯಾದವ್ ವಿರುದ್ಧ ಹೇಳಿಕೆ ನೀಡಿದ್ದ ಬೆನಿ ಪ್ರಸಾದ್ ತೀವ್ರ ಟೀಕೆಗೆ ಗುರಿಯಾಗಿದ್ದರು. ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಅವರು
ಭಯೋತ್ಪಾದನೆಯ ರಕ್ಷಕ ಎಂದು ಆರೋಪಿಸಿದ್ದರು. ಬೆನಿ ಪ್ರಸಾದ್‌ರ ಈ ಹೇಳಿಕೆಯನ್ನು ಕಾಂಗ್ರೆಸ್ ಖಂಡಿಸಿತ್ತು. ಈ ಕಾರಣದಿಂದಾಗಿಯೇ ಬೆನಿ ಅವರು ಕಾಂಗ್ರೆಸ್ ಸಂಸದೀಯ ಸಭೆಗೆ ಗೈರು ಹಾಜರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಮಾಯಾವತಿ ಅವರು ಭ್ರಷ್ಟರಾಗಿದ್ದು ಮುಲಾಯಂ ಸಿಂಗ್ ಓರ್ವ ಗೂಂಡಾ ಹಾಗು ಭಯೋತ್ಪಾದಕರ ರಕ್ಷಕರಾಗಿದ್ದಾರೆ ಎಂದು ಬಿನಿ ಹೇಳಿಕೆ ನೀಡಿದ್ದರು.  

ಏತನ್ಮಧ್ಯೆ, ಬೆನಿ ಪ್ರಸಾದ್ ಬಹುಜನ್ ಸಮಾಜ್ ಪಕ್ಷಕ್ಕೆ ಸೇರುವ ಸಿದ್ಧತೆ ನಡೆಸಿದ್ದು, ಪಕ್ಷದ ನೇತಾರ ಸತೀಶ್ ಚಂದ್ರ ಮಿಶ್ರಾ ಅವರನ್ನು ಭೇಟಿ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಮುಲಾಯಂ ಸಿಂಗ್ ಅವರ ವಿರುದ್ಧ ಹೇಳಿಕೆ ನೀಡಿದ ಬೆನಿ ಪ್ರಸಾದ್ ಕ್ಷಮೆ ಕೇಳಬೇಕು ಹಾಗು ಅವರು ರಾಜಿನಾಮೆ ನೀಡಬೇಕೆಂದು ಸಮಾಜವಾದಿ ಪಕ್ಷ ಒತ್ತಾಯಿಸಿತ್ತು. ಆದಾಗ್ಯೂ, ತಾನು ಯಾವುದೇ ತಪ್ಪು ಮಾಡಿಲ್ಲ ಆದ್ದರಿಂದ ಕ್ಷಮೆ ಕೇಳುವ ಅವಶ್ಯಕತೆ ಇಲ್ಲ ಎಂದು ಬೆನಿ ಪ್ರಸಾದ್ ಉತ್ತರಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement