ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮೊಯ್ಲಿ ಮಗನ ಡೀಲ್ ಪ್ರಕರಣ: ಲೋಕಸಭೆಯಲ್ಲಿ ಕೋಲಾಹಲ

ಕೇಂದ್ರ ಇಂಧನ ಸಚಿವ ಎಂ.ವೀರಪ್ಪ ಮೊಯ್ಲಿ ಅವರ ಪುತ್ರ ಹರ್ಷ ಮೊಯ್ಲಿ ಅವರ ಡೀಲ್ ಪ್ರಕರಣ ಮಂಗಳವಾರ ಲೋಕಸಭೆಯಲ್ಲಿ..

Lingaraj Badiger
Updated On : 19 Mar 2013, 12:16 pm

ನವದೆಹಲಿ: ಕೇಂದ್ರ ಇಂಧನ ಸಚಿವ ಎಂ.ವೀರಪ್ಪ ಮೊಯ್ಲಿ ಅವರ ಪುತ್ರ ಹರ್ಷ ಮೊಯ್ಲಿ ಅವರ ಡೀಲ್ ಪ್ರಕರಣ ಮಂಗಳವಾರ ಲೋಕಸಭೆಯಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿತು.

ವಿಷಯ ಪ್ರಸ್ತಾಪಿಸಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತ್‌ಕುಮಾರ್ ಹಾಗೂ ಸಂಸದ ಪ್ರಹ್ಲಾದ್ ಜೋಶಿ ಅವರು, ಇದೊಂದು ಗಂಭೀರ ಪ್ರಕರಣವಾಗಿದ್ದು, ಮೊಯ್ಲಿ ಮಗನ ಟ್ರಸ್ಟ್‌ಗೆ ದೇಣಿಗೆ ಪಡೆದಿರುವ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಈ ಮಧ್ಯೆ, ಇದೊಂದು ಗಂಭಿರವಾದ ವೃತ್ತಿ ಸಂದಿಗ್ಧತೆಯ ಪ್ರಕರಣವಾಗಿದ್ದು, ವೀರಪ್ಪ ಮೊಯ್ಲಿ ಅವರು ತಕ್ಷಣವೇ ರಾಜಿನಾಮೆ ನೀಡಬೇಕು ಎಂದು ಅನಂತ್‌ಕುಮಾರ್ ಆಗ್ರಹಿಸಿದ್ದಾರೆ.

ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಮೊಯ್ಲಿ, ತಮ್ಮ ಮಗನ ಕಂಪನಿಯಲ್ಲಿ ಯಾವುದೇ ಲೋಪವಾಗಿಲ್ಲ, ಎಲ್ಲವೂ ಕಾನೂನು ರೀತಿಯಲ್ಲೆ ನಡೆದಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಈ ಹಿಂದೆ ಕಾರ್ಪೊರೇಟ್ ವ್ಯವಹಾರಗಳ ಖಾತೆ ನಿಭಾಯಿಸುತ್ತಿದ್ದಾಗ ಮೊಯ್ಲಿ ಅವರು, ಅಧಿಕಾರ ದುರ್ಬಳಕೆ ಮಾಡಿಕೊಂಡು ತಮ್ಮ ಮಗನ ಸಂಸ್ಥೆಗೆ ಹಣ ಸಂಗ್ರಹಿಸಿದ್ದಾರೆ ಎಂದು ಹೇಳಲಾಗಿದೆ.

ಪುತ್ರ ಹರ್ಷ ಮೊಯ್ಲಿ ಕಾರ್ಕಳ ಮತ್ತು ಚಿಕ್ಕಬಳ್ಳಾಪುರದಲ್ಲಿ ನಡೆಸುವ ಕಿಸಾನ್ ಮಹಾಸಭಾ ಟ್ರಸ್ಟ್‌ಗೆ ವೀರಪ್ಪ ಮೊಯ್ಲಿ ಅವರೇ ಕಾರ್ಪೊರೇಟ್ ವ್ಯವಹಾರಗಳ ಸಚಿವರಾಗಿ ಐಟಿಸಿ ಕಂಪನಿಯಿಂದ ಮುಂದಿನ 5 ವರ್ಷಗಳವರೆಗೆ ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ ಅಡಿಯಲ್ಲಿ ಹಣ ಕೊಡಿಸಿದ್ದಾರೆ ಎಂದು ಹೇಳಲಾಗಿದೆ.

ವಿಚಿತ್ರವೆಂದರೆ ಹರ್ಷ ಮೊಯ್ಲಿ ಸ್ವತಃ ತಮ್ಮ ತಂದೆಯೇ ಹಣ ಕೊಡಿಸುತ್ತಿದ್ದಾರೆ ಎಂದು ಹೇಳಿರುವ ಇ ಮೇಲ್ ಬಹಿರಂಗವಾಗಿದ್ದು ಇದನ್ನು ಹರ್ಷ ಸೆಪ್ಟೆಂಬರ್ 21, 2012 ರಂದು ತನ್ನ ಪಾಲುದಾರ ಸುಧೀರ್ ಪ್ರಭು ಅವರಿಗೆ ಕಳುಹಿಸಿದ್ದರು ಎನ್ನಲಾಗಿದೆ. ಹರ್ಷ ಮೊಯ್ಲಿ ಇ ಮೇಲ್ ಪ್ರಕಾರ ಸುಧೀರ್, ಐಟಿಸಿ ಕಂಪನಿಯಿಂದ ಮುಂದಿನ 5 ವರ್ಷಗಳವರೆಗೆ ಹಣವನ್ನು ನೀಡಲು ಒಪ್ಪಿಕೊಂಡಿದ್ದು ನಾವು ಆದಷ್ಟು ಶೀಘ್ರವೇ ಅವರಿಗೆ ನಮ್ಮ ಖರ್ಚು ವೆಚ್ಚದ ವಿವರವನ್ನು ಕಳುಹಿಸಬೇಕಿದೆ ಎಂದು ಹೇಳಿದ್ದು ಸುಧೀರ್ ಜೊತೆಗೆ ತಮ್ಮ ತಂದೆಯ ಅಧಿಕೃತ ಇ ಮೇಲ್ vmoily@kar.nic.inಗೂ ಕೂಡ ಕಳುಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement