ಲೋಕಸಭೆಯಲ್ಲಿ ಅತ್ಯಾಚಾರ ತಡೆ ಮಸೂದೆ ಅಂಗೀಕಾರ
ಅತ್ಯಾಚಾರ ಮಸೂದೆ ಜಾರಿಯ ಬಗ್ಗೆ ಮಂಗಳವಾರ ಸಂಜೆ ಲೋಕಸಭೆಯಲ್ಲಿ ಚರ್ಚೆಯಾಗಿದ್ದು ಪ್ರಸ್ತುತ ಮಸೂದೆ...
ನವದೆಹಲಿ: ಅತ್ಯಾಚಾರ ಮಸೂದೆ ಜಾರಿಯ ಬಗ್ಗೆ ಮಂಗಳವಾರ ಸಂಜೆ ಲೋಕಸಭೆಯಲ್ಲಿ ಚರ್ಚೆಯಾಗಿದ್ದು ಪ್ರಸ್ತುತ ಮಸೂದೆ ಲೋಕಸಭೆಯಲ್ಲಿ ಅಂಗೀಕರಿಸಲ್ಪಟ್ಟಿದೆ.
ಮತದಾನದ ಮೂಲಕ ಮಸೂದೆ ಅಂಗೀಕರಿಸಲ್ಪಟ್ಟಿದ್ದು, 105 ಮಂದಿ ಮಸೂದೆಯ ವಿರುದ್ಧ ಹಾಗು 62 ಮಂದಿ ಮಸೂದೆ ಪರವಾಗಿ ಮತ ಚಲಾಯಿಸಿದ್ದಾರೆ.
ಅಪರಾಧ ನಿಯಮ (ತಿದ್ದುಪಡಿ )ಮಸೂದೆ 2013ರ ಬಗ್ಗೆ ಲೋಕಸಭೆಯಲ್ಲಿ ಚರ್ಚೆಯಾಗಿದ್ದು, ಮಕ್ಕಳ ಕಳ್ಳ ಸಾಗಾಣಿಕೆಯ ಆರೋಪಿಗಳಿಗೆ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಲು ಲೋಕಸಭಾ ಸದಸ್ಯರು ವಿರೋಧ ಸೂಚಿಸಿದ್ದಾರೆ.
ಅದೇ ವೇಳೆ ಮಹಿಳೆ ವಿರುದ್ಧ ದೌರ್ಜನ್ಯ ನಡೆಸಿದ ಆರೋಪಿಗಳಿಗೆ ಜೀವಾವಧಿ ಅಥವಾ ಮರಣದಂಡನೆಯನ್ನು ವಿಧಿಸಲಾಗುವುದು ಎಂದು ಈ ಮಸೂದೆಯಲ್ಲಿ ಹೇಳಲಾಗಿದೆ.
ಈ ಮಸೂದೆಯಲ್ಲಿ ಭಾರತೀಯ ದಂಡ ಸಂಹಿತೆ, ಅಪರಾಧಿ ನಿಯಮ ಸಂಹಿತೆ, ಭಾರತೀಯ ಸಾಕ್ಷ್ಯ ಕಾನೂನು ಹಾಗು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾನೂನಿನಲ್ಲಿ ತಿದ್ದುಪಡಿ ತರುವ ಬಗ್ಗೆ ಉಲ್ಲೇಖಿಸಲಾಗಿತ್ತು.