ಹೈಸ್ಫೋಟದ ರುವಾರಿಗಳ ಮಾಹಿತಿ ನೀಡಿದರೆ 10 ಲಕ್ಷ ರು. ಬಹುಮಾನ
ಫೆ.21ರಂದು ಹೈದ್ರಾಬಾದ್ನಲ್ಲಿ ನಡೆದ ಬಾಂಬ್ಸ್ಫೋಟದ ರುವಾರಿಗಳ ಬಗ್ಗೆ ಮಾಹಿತಿ ನೀಡಿದವರಿಗೆ ರಾಷ್ಟ್ರೀಯ ತನಿಖಾ ದಳ...
ಹೈದ್ರಾಬಾದ್: ಫೆ.21ರಂದು ಹೈದ್ರಾಬಾದ್ನಲ್ಲಿ ನಡೆದ ಬಾಂಬ್ಸ್ಫೋಟದ ರುವಾರಿಗಳ ಬಗ್ಗೆ ಮಾಹಿತಿ ನೀಡಿದವರಿಗೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) 10 ಲಕ್ಷ ರು. ಬಹುಮಾನ ಘೋಷಿಸಿದೆ.
ಹೈದ್ರಾಬಾದ್ನಲ್ಲಿ ನಡೆದ ಅವಳಿ ಬಾಂಬ್ ಸ್ಫೋಟದ ತನಿಖೆಯನ್ನು ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ, ಮಾಹಿತಿ ನೀಡಿದವರ ವಿವರವನ್ನು ಗೌಪ್ಯವಾಗಿಡಲಾಗುವುದು ಎಂದು ಹೇಳಿದೆ.
ಒಂದು ವೇಳೆ ಯಾರಿಗಾದರೂ ಬಾಂಬ್ ಸ್ಫೋಟದ ರುವಾರಿಗಳ ಬಗ್ಗೆ ಮಾಹಿತಿ ಇದ್ದರೆ, ಅವರು 040-2776 4488, 040-4005 8500 ಸಂಖ್ಯೆಗೆ ಫೋನ್ ಮಾಡಬಹುದು, dilsukhnagartwinblasts@gmail.comಗೆ ಇಮೇಲ್ ಕಳುಹಿಸಬಹುದು ಇಲ್ಲವೇ ಎನ್ಐಎಗೆ ಅಂಚೆ ಮೂಲಕವೂ ತಿಳಿಸಬಹುದಾಗಿದೆ.
ಹೈದ್ರಾಬಾದ್ನ ದಿಲ್ಸುಖ್ ನಗರದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ 17 ಮಂದಿ ಸಾವಿಗೀಡಾಗಿದ್ದು, 116 ಮಂದಿಗೆ ಗಾಯಗಳಾಗಿದ್ದವು.