ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಪ್ರಧಾನಿಗೆ ಡಿಎಂಕೆ ಸಚಿವರ ರಾಜೀನಾಮೆ ಸಲ್ಲಿಕೆ

ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದ ನಂತರ ಡಿಎಂಕೆಯ ಮೂವರು ಸಚಿವರು ಬುಧವಾರ..

Lingaraj Badiger
Updated On : 20 Mar 2013, 1:41 am

ನವದೆಹಲಿ: ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದ ನಂತರ ಡಿಎಂಕೆಯ ಮೂವರು ಸಚಿವರು ಬುಧವಾರ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿ, ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ನು ಇಬ್ಬರು ಡಿಎಂಕೆ ಸಚಿವರು ರಾಜಿನಾಮೆ ಸಲ್ಲಿಸಬೇಕಿದೆ.

ರಾಜಿನಾಮೆ ಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಎಂಕೆ ಹಿರಿಯ ನಾಯಕ ಟಿ.ಆರ್.ಬಾಲು ಅವರು, ಪ್ರಧಾನಿ ಸಿಂಗ್ ಅವರು ತಮ್ಮ ರಾಜೀನಾಮೆಯನ್ನು ಸ್ವೀಕರಿಸಿರುವುದಾಗಿ ಹೇಳಿದರು.

ಇದೇ ವೇಳೆ, ಐವರು ಸಚಿವರು ಒಟ್ಟಿಗೆ ರಾಜಿನಾಮೆ ನೀಡಬಹುದಿತ್ತಲ್ಲ ಎಂಬ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಾಲು, ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಮತ್ತು ಬಣ ಇಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೆ ಎನ್‌ಡಿಎ ಸೇರುತ್ತಿರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಎನ್‌ಡಿಎ ಸೇರುವ ಪ್ರಶ್ನೆಯೇ ಬರುವುದಿಲ್ಲ ಎಂದರು.

ಸಿಂಗ್ ಸಂಪುಟದಿಂದ ತಾವು ಹೊರ ಬರುತ್ತಿರುವುದಾಗಿ ಟಿ.ಆರ್. ಬಾಲು ಹಾಗೂ ಇತರ ನಾಲ್ವರು ಡಿಎಂಕೆ ಸಚಿವರು ನಿನ್ನೆ ಘೋಷಿಸಿದ್ದರು ಮತ್ತು ಈ ಸಂಬಂಧ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಾಗೂ ಪ್ರಧಾನಿ ಅವರನ್ನು ಭೇಟಿ ಮಾಡಿ ಯುಪಿಎ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆಯುವ ಪತ್ರ ನೀಡಿದ್ದರು.

ಡಿಎಂಕೆ ಲೋಕಸಭೆಯಲ್ಲಿ 18 ಸಂಸದರನ್ನು ಹೊಂದಿದೆ. ಬೆಂಬಲ ಹಿಂಪಡೆಯುವ ನಿರ್ಧಾರದಿಂದಾಗಿ ಯುಪಿಎ ಬಲ 232ಕ್ಕೆ ಕುಸಿದಿದೆ. ಆದರೂ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ ಎಂದು ಯುಪಿಎ ಹೇಳಿಕೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement