ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

'ಮಹಾ' ಪೊಲೀಸ್ ಗೆ ಥಳಿತ ಪ್ರಕರಣ; 5 ಶಾಸಕರು ವಜಾ

ಮಹಾರಾಷ್ಟ್ರದ ಪೊಲೀಸ್ ಅಧಿಕಾರಿಯೊಬ್ಬರಿಗೆ ಥಳಿಸಿದ ಆರೋಪದಲ್ಲಿ ಮಹಾರಾಷ್ಟ್ರ ವಿಧಾನಸಭೆ ತಮ್ಮ ಐವರು ಶಾಸಕರನ್ನು ಬುಧವಾರ...

Rashmi Kasaragodu
Updated On : 20 Mar 2013, 5:34 am

ಮುಂಬೈ: ಮಹಾರಾಷ್ಟ್ರದ ಪೊಲೀಸ್ ಅಧಿಕಾರಿಯೊಬ್ಬರಿಗೆ ಥಳಿಸಿದ ಆರೋಪದಲ್ಲಿ ಮಹಾರಾಷ್ಟ್ರ ವಿಧಾನಸಭೆ ತಮ್ಮ ಐವರು ಶಾಸಕರನ್ನು ಬುಧವಾರ ವಜಾಗೊಳಿಸಿದೆ.
ವಿಧಾನಸಭೆಯಲ್ಲಿ ಪೊಲೀಸ್ ಅಧಿಕಾರಿ ಮೇಲೆ ದಾಳಿ ಮಾಡಿದ ಆರೋಪದಲ್ಲಿ ಈ ಐವರು ಶಾಸಕರನ್ನು ವರ್ಷಾಂತ್ಯದ ವರೆಗೆ ವಜಾಗೊಳಿಸಲಾಗಿದೆ.

ಮಹಾರಾಷ್ಟ್ರದ ಸಹಾಯಕ ಪೊಲೀಸ್ ಅಧಿಕಾರಿ ಸಚಿನ್ ಸೂರ್ಯವಂಶಿ ಅವರ ಮೇಲೆ ವಾಸೈ ಶಾಸಕ ಕ್ಷಿತಿಜ್ ಠಾಕೂರ್, ಎಂಎನ್ಎಸ್ ಶಾಸಕ ರಾಮ್ ಕದಂ, ರಾಜನ್ ಸಲ್ವಿ (ಶಿವ ಸೇನಾ), ಪ್ರದೀಪ್ ಜೈಸ್ವಾಲ್ (ಸ್ವತಂತ್ರ) ಮೊದಲಾದವರು ಸೇರಿ ಆಕ್ರಮಣ ಮಾಡಿದ್ದರು.

ವಿಧಾನಸಭಾ ಕಲಾಪಕ್ಕೆ ಹೊರಟಿದ್ದ ಶಾಸಕರು ವೇಗವಾಗಿ ಕಾರು ಚಲಾಯಿಸಿದ್ದುದನ್ನು ನೋಡಿ, ಸೂರ್ಯವಂಶಿ ಅವರು ಕಾರಿಗೆ ತಡೆಯೊಡ್ಡಿದ್ದರು. ಇದಕ್ಕೆ ಆಕ್ರೋಶಗೊಂಡ ಶಾಸಕರು ಸೂರ್ಯವಂಶಿಯವರನ್ನು ಹಿಗ್ಗಾಮುಗ್ಗ ಥಳಿಸಿದ್ದರು.

ಈ ಬಗ್ಗೆ ಸೂರ್ಯವಂಶಿ ದೂರು ನೀಡಿದ್ದು, ಶಾಸಕರ ವಿರುದ್ದ ಬುಧವಾರ ಎಫ್ಐಆರ್ ದಾಖಲಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement