ಮೇ 11ಕ್ಕೆ ಪಾಕ್ನಲ್ಲಿ ಸಾರ್ವತ್ರಿಕ ಚುನಾವಣೆ
ಇಸ್ಲಾಮಾಬಾದ್: ಪಾಕಿಸ್ತಾನ ಚುನಾವಣಾ ಆಯೋಗ ಬುಧವಾರ ಸಾರ್ವತ್ರಿಕ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಮೇ 11ರಂದು ಪಾಕ್ ಸಂಸತ್ ಚುನಾವಣೆ ನಡೆಯಲಿದೆ.
ಮೇ 11ರಂದು ದೇಶಾದ್ಯಂತ ಸಂಸತ್ ಚುನಾವಣೆ ನಡೆಸಲು ಪಾಕ್ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಅಧ್ಯಕ್ಷರ ವಕ್ತಾರ ಫರಾತುಲ್ಲಾ ಬಾಬರ್ ಅವರು ಹೇಳಿದ್ದಾರೆ.
ಈ ಚುನಾವಣೆ ನಡೆದರೆ, ಪಾಕ್ನಲ್ಲಿ ಮೊದಲ ಬಾರಿಗೆ ಚುನಾಯಿತ ಸರ್ಕಾರವೊಂದು ತನ್ನ ಅಧಿಕಾರವಧಿ ಪೂರ್ಣಗೊಳಿಸಿ ಮತ್ತೊಂದು ಸರ್ಕಾರಕ್ಕೆ ಅಧಿಕಾರ ಅಸ್ತಾಂತರಿಸಲಿದೆ. 1947ರಲ್ಲಿ ಪಾಕಿಸ್ತಾನ ಸ್ವಾತಂತ್ರ್ಯ ಪಡೆದ ನಂತರ ಸುಮಾರು ಅರ್ಧದಷ್ಟು ಬಾರಿ ಪಾಕ್ ಸೇನೆ ಅಧಿಕಾರ ಕಿತ್ತುಕೊಂಡ ನಿದರ್ಶನಗಳಿವೆ.