ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ರ್ಯಾಗಿಂಗ್ ಗೊಳಗಾದ ವಿದ್ಯಾರ್ಥಿಯ ಸ್ಥಿತಿ ಚಿಂತಾಜನಕ

ಗುರ್‌ಗಾಂವ್‌ನಲ್ಲಿ ಇಂಜಿನಿಯರಿಂಗ್ ಪ್ರಥಮ ವರ್ಷ ವಿದ್ಯಾರ್ಥಿಯೊಬ್ಬ ರ್ಯಾಗಿಂಗ್‌ಗೊಳಗಾಗಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ...

Rashmi Kasaragodu
Updated On : 20 Mar 2013, 4:07 am

ಆಗ್ರಾ: ಗುರ್‌ಗಾಂವ್‌ನಲ್ಲಿ ಇಂಜಿನಿಯರಿಂಗ್ ಪ್ರಥಮ ವರ್ಷ ವಿದ್ಯಾರ್ಥಿಯೊಬ್ಬ ರ್ಯಾಗಿಂಗ್‌ಗೊಳಗಾಗಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ. ಮಂಗಳವಾರ ತೀವ್ರ ಗಾಯಗೊಂಡ ಈ ವಿದ್ಯಾರ್ಥಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಾಲೇಜು ಆವರಣದ ಬಳಿ ಬಿದ್ದಿದ್ದನು ಎನ್ನಲಾಗುತ್ತಿದೆ. ಕೂಡಲೇ ಈತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳು ತನಗೆ ಪದೇ ಪದೇ ಕಿರುಕುಳ ನೀಡುತ್ತಾರೆ ಎಂದು ಈ ವಿದ್ಯಾರ್ಥಿ ಕಾಲೇಜು ಪ್ರಾಧ್ಯಾಪಕರಿಗೆ ದೂರು ನೀಡಿದ್ದನು. ಆದರೆ ಕಾಲೇಜಿನ ಅಧಿಕೃತರು ಯಾವುದೇ ಕ್ರಮ ಕೈಗೊಳ್ಳಲು ಮುಂದಾಗಿಲ್ಲ ಎಂದು ಆತನ ಗೆಳೆಯರು ಹೇಳಿದ್ದಾರೆ.

ರ್ಯಾಗಿಂಗ್ ಗೊಳಗಾದ ವಿದ್ಯಾರ್ಥಿಯನ್ನು ಹಿರಿಯ ವಿದ್ಯಾರ್ಥಿಗಳು ಚೆನ್ನಾಗಿ ಥಳಿಸಿದ ನಂತರ ವಿಷವುಣಿಸಿದ್ದಾರೆ ಎಂದು ವಿದ್ಯಾರ್ಥಿಯ ಹೆತ್ತವರು ಆರೋಪಿಸಿದ್ದಾರೆ.

ದೆಹಲಿ ಮೂಲದ ಈ ವಿದ್ಯಾರ್ಥಿ ಗುರ್‌ಗಾಂವ್‌ನಲ್ಲಿರುವ ಕಾಲೇಜಿಗೆ ಮನೆಯಿಂದಲೇ ಹೋಗಿ ಬರುತ್ತಿದ್ದನು. ಈತ ಮಂಗಳವಾರ ನಡೆದ ಗಣಿತ ಪರೀಕ್ಷೆಗೂ ಹಾಜರಾಗಿದ್ದನು ಎನ್ನುತ್ತಾರೆ ಅಲ್ಲಿನ ವಿದ್ಯಾರ್ಥಿಗಳು.

ತನ್ನ ಮಗನ ಸ್ಥಿತಿ ಚಿಂತಾಜನಕವಾಗಿದ್ದರೂ ಕಾಲೇಜು ಅಧಿಕೃತರು ತನಗೆ ಮಾಹಿತಿ ನೀಡದೆ ನಿರ್ಲಕ್ಷ್ಯ ಮಾಡಿದ್ದಕ್ಕಾಗಿ ವಿದ್ಯಾರ್ಥಿಯ ಅಪ್ಪ ಕಾಲೇಜು ಅಧಿಕೃತರ ವಿರುದ್ಧ ದೂರು ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement