ಸರ್ವಪಕ್ಷ ಸಭೆ ಕರೆದ ಸ್ಪೀಕರ್ ಮೀರಾ
ಡಿಎಂಕೆ ಕೇಂದ್ರ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಸ್ ಪಡೆದಿರುವ ಹಿನ್ನೆಲೆಯಲ್ಲಿ, ಲಂಕಾ ತಮಿಳರ ಸಮಸ್ಯೆ ಬಗ್ಗೆ ...
ನವದೆಹಲಿ: ಡಿಎಂಕೆ ಕೇಂದ್ರ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಸ್ ಪಡೆದಿರುವ ಹಿನ್ನೆಲೆಯಲ್ಲಿ, ಲಂಕಾ ತಮಿಳರ ಸಮಸ್ಯೆ ಬಗ್ಗೆ ನಿಲುವಳಿ ಮಂಡನೆಗಾಗಿ ಸ್ಪೀಕರ್ ಮೀರಾ ಕುಮಾರ್ ಸರ್ವಪಕ್ಷಗಳ ಸಭೆ ಕರೆದಿದ್ದಾರೆ.
ಬುಧವಾರ ಸಂಜೆ 7.30ಕ್ಕೆ ಸರ್ವ ಪಕ್ಷದ ನಾಯಕರು ಸಭೆ ಸೇರಲಿದ್ದು, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದಲ್ಲಿ ಅಮೆರಿಕ ಮಂಡಿಸಲಿರುವ ನಿಲುವಳಿ ಬಗ್ಗೆ ಇಲ್ಲಿ ಚರ್ಚೆ ನಡೆಸಲಾಗುವುದು.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದ (ಯುಎನ್ಎಚ್ಆರ್ಸಿ) ಯಲ್ಲಿ ಶ್ರೀಲಂಕಾದ ವಿರುದ್ಧ ಮತ ಹಾಕುವ ಬಗ್ಗೆ ಸರ್ವಪಕ್ಷದ ನಾಯಕರೊಂದಿಗೆ ಸಮಾಲೋಚನೆ ನಡೆಸಿ ನಿರ್ಣಯ ಕೈಗೊಳ್ಳಲಾಗುವುದು.
ಜೆನಿವಾದಲ್ಲಿ ಶುಕ್ರವಾರ ನಡೆಯಲಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದಲ್ಲಿ ಅಮೆರಿಕ ಮಂಡಲಿಸಲಿರುವ ಶ್ರೀಲಂಕಾ ವಿರುದ್ಧದ ನಿಲುವಳಿಯನ್ನು ಮತ್ತಷ್ಟು ಬಲಿಷ್ಠಗೊಳಿಸಲು ತಿದ್ದುಪಡಿ ಮಂಡಿಸುವಂತೆ ಡಿಎಂಕೆ ಒತ್ತಡ ಹೇರಿದ್ದು, ಈ ಬಗ್ಗೆ ಸಮಾಲೋಚನೆ ನಡೆಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ.