ಐಎಎಸ್ ಪರೀಕ್ಷೆಗೆ ಇಂಗ್ಲಿಷ್ ಕಡ್ಡಾಯವಿಲ್ಲ: ಸಚಿವ
ಇಂಡಿಯನ್ ಅಡ್ಮಿನಿಸ್ಟ್ರೇಟಿವ್ ಸರ್ವೀಸ್ (ಐಎಎಸ್) ಪರೀಕ್ಷೆಯಲ್ಲಿ ಇಂಗ್ಲಿಷ್ ಕಡ್ಡಾಯವಿಲ್ಲ ಎಂದು ಸರ್ಕಾರ ಹೇಳಿದೆ. ಆದ್ದರಿಂದ ಇನ್ನು...
ನವದೆಹಲಿ: ಇಂಡಿಯನ್ ಅಡ್ಮಿನಿಸ್ಟ್ರೇಟಿವ್ ಸರ್ವೀಸ್ (ಐಎಎಸ್) ಪರೀಕ್ಷೆಯಲ್ಲಿ ಇಂಗ್ಲಿಷ್ ಕಡ್ಡಾಯವಿಲ್ಲ ಎಂದು ಸರ್ಕಾರ ಹೇಳಿದೆ. ಆದ್ದರಿಂದ ಇನ್ನು ಮುಂದೆ ಐಎಎಸ್ ಪರೀಕ್ಷೆ ಪ್ರಾದೇಶಿಕ ಭಾಷೆಯಲ್ಲಿಯೂ ಬರೆಯಬಹುದಾಗಿದೆ.
ಪರೀಕ್ಷಾರ್ಥಿಯು ಸಂವಿಧಾನದ 8ನೇ ಪರಿಚ್ಛೇದದಡಿಯಲ್ಲಿ ಬರುವ ಯಾವುದಾದರೊಂದು ಪ್ರಾದೇಶಿಕ ಭಾಷೆ ಅಥವಾ ಇಂಗ್ಲಿಷ್ನಲ್ಲಿ ಪರೀಕ್ಷೆ ಬರೆಯಬಹುದಾಗಿದೆ ಎಂದು ಪರ್ಸನಲ್ ಆ್ಯಂಡ್ ಟ್ರೈನಿಂಗ್ ರಾಜ್ಯ ಸಚಿವ ವಿ.ನಾರಾಯಣಸ್ವಾಮಿ ಹೇಳಿದ್ದಾರೆ.
2013ರ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಪರೀಕ್ಷಾರ್ಥಿಗಳು ಕಡ್ಡಾಯವಾಗಿ ಇಂಗ್ಲಿಷ್ನಲ್ಲಿ ಬರೆಯಬೇಕು ಎಂದು ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ ಮಾರ್ಚ್ 5ಕ್ಕೆ ಆದೇಶಿಸಿತ್ತು.
ಈ ಬಗ್ಗೆ ಲೋಕಸಭೆಯಲ್ಲಿ ಗದ್ದಲವುಂಟಾಗಿದ್ದು, ಪ್ರಸ್ತುತ ಆದೇಶದ ಬಗ್ಗೆ ಪರಿಶೀಲಿಸುವುದಾಗಿ ಸಚಿವರು ಹೇಳಿದ್ದಾರೆ.