ಸ್ಟಾಲಿನ್ ನಿವಾಸದ ಮೇಲೆ ಸಿಬಿಐ ದಾಳಿಯಲ್ಲಿ ಸರ್ಕಾರದ ಕೈವಾಡವಿಲ್ಲ: ಪ್ರಧಾನಿ
ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಅವರ ಪುತ್ರ ಎಂ.ಕೆ ಸ್ಟಾಲಿನ್ ಅವರ ನಿವಾಸದ ಮೇಲೆ ನಡೆದ ಸಿಬಿಐ ದಾಳಿಯಲ್ಲಿ ...
ನವದೆಹಲಿ: ಡಿಎಂಕೆ ಮುಖ್ಯಸ್ಥಕರುಣಾನಿಧಿ ಅವರ ಪುತ್ರ ಎಂ.ಕೆ ಸ್ಟಾಲಿನ್ಅವರ ನಿವಾಸದಮೇಲೆ ನಡೆದಸಿಬಿಐ ದಾಳಿಯಲ್ಲಿಸರ್ಕಾರದ ಕೈವಾಡವಿಲ್ಲ ಎಂದು ಪ್ರಧಾನಿ ಮನಮೋಹನ್ಸಿಂಗ್ ಹೇಳಿದ್ದಾರೆ.
ಈ ವಿಷಯದ ಬಗ್ಗೆನಮಗೆ ಬೇಸರವಿದೆ.ಸಿಬಿಐ ದಾಳಿಯಲ್ಲಿನಮ್ಮ ಪಾತ್ರವೇನೂಇಲ್ಲ. ಈಬಗ್ಗೆ ನಾವುವಿವರಣೆಗಳನ್ನು ಕೇಳುತ್ತೇವೆ. ಹೀಗೆ ಮಾಡಬಾರದಾಗಿತ್ತು, ಇದು ದುರದೃಷ್ಟಕರ ಎಂದು ಮಾಧ್ಯಮದವರೊಂದಿಗೆಮಾತನಾಡಿದ ಸಿಂಗ್ ಹೇಳಿದ್ದಾರೆ.
ಯುಪಿಎ ಸರ್ಕಾರದಿಂದ ಡಿಎಂಕೆಬೆಂಬಲ ಹಿಂತೆಗೆದುಕೊಂಡ ಎರಡೇದಿನಗಳಲ್ಲಿ ಸ್ಟಾಲಿನ್ ನಿವಾಸದ ಮೇಲೆ ಸಿಬಿಐದಾಳಿ ನಡೆಸಿರುವುದುಹೆಚ್ಚಿನ ಗುಸುಗುಸುಗೆ ಕಾರಣವಾಗಿತ್ತು.
ಕಾಂಗ್ರೆಸ್ ಸಚಿವರಾದ ಪಿ.ಚಿದಂಬರಂ,ಕಪಿಲ್ ಸಿಬಲ್ಮತ್ತು ಕಮಲ್‌ನಾಥ್ಸಿಬಿಐ ದಾಳಿಯನ್ನುಖಂಡಿಸಿದ್ದು, ಕೇಂದ್ರ ಸರ್ಕಾರಕ್ಕೆ ಈ ಬಗ್ಗೆಮಾಹಿತಿ ಇರಲಿಲ್ಲಎಂದು ಹೇಳಿದ್ದಾರೆ.
ಆದಾಗ್ಯೂ, ಸ್ಟಾಲಿನ್ ಮನೆಯಮೇಲೆ ನಡೆದಸಿಬಿಐ ದಾಳಿಯಹಿಂದೆ ರಾಜಕೀಯಹಗೆತನವಿದೆ ಎಂದು ಡಿಎಂಕೆ ಕಿಡಿ ಕಾರಿದೆ.
ತೆರಿಗೆ ಪಾವತಿ ಮಾಡದೇಕಾರು ಆಮದುಮಾಡಿರುವ ಆರೋಪದಲ್ಲಿ ಗುರುವಾರ ಬೆಳಗ್ಗೆ ಸ್ಟಾಲಿನ್ಅವರ ನಿವಾಸಸೇರಿದಂತೆ 19 ಪ್ರದೇಶಗಳ ಮೇಲೆ ಸಿಬಿಐದಾಳಿ ನಡೆದಿತ್ತು.