ತ.ನಾಡಿನಲ್ಲಿ ಮುಂದುವರೆದ ಸಿಬಿಐ ದಾಳಿ, 33 ವಿದೇಶಿ ಕಾರು ಜಪ್ತಿ
ತಮಿಳುನಾಡಿನಲ್ಲಿ ಸಿಬಿಐ ದಾಳಿ ಮುಂದುವರೆದಿದ್ದು, ಚೆನ್ನೈ ಸೇರಿದಂತೆ ಇತರೆ 19 ನಗರಗಳಲ್ಲಿ ದಾಳಿ ಮಾಡಿ, ಅಕ್ರಮವಾಗಿ ಆಮದು..
ಚೆನ್ನೈ: ತಮಿಳುನಾಡಿನಲ್ಲಿ ಸಿಬಿಐ ದಾಳಿ ಮುಂದುವರೆದಿದ್ದು, ಚೆನ್ನೈ ಸೇರಿದಂತೆ ಇತರೆ 19 ನಗರಗಳಲ್ಲಿ ದಾಳಿ ಮಾಡಿ, ಅಕ್ರಮವಾಗಿ ಆಮದುಮಾಡಿಕೊಂಡಿದ್ದ 33 ವಿದೇಶಿ ಕಾರುಗಳನ್ನು ಜಪ್ತಿ ಮಾಡಲಾಗಿದೆ.
ವಿದೇಶಿ ಕಾರುಗಳ ಖರೀದಿ ಸಂಬಂಧ ನಿನ್ನೆ ಚೆನ್ನೈ ಸೇರಿದಂತೆ ತಮಿಳುನಾಡಿನ ಹಲವು ಕಡೆ ದಾಳಿ ನಡೆಸಿದ್ದ ಸಿಬಿಐ, ಇಂದು ಸಹ ತನ್ನ ದಾಳಿಯನ್ನು ಮುಂದುವರೆಸಿದ್ದು, 33 ವಿದೇಶಿ ವಾಹನಗಳನ್ನು ಜಪ್ತಿ ಮಾಡಿದೆ.
ಈ ಸಂಬಂಧ ಗುರುವಾರ ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಅವರ ಪುತ್ರ ಎಂ.ಕೆ.ಸ್ಟಾಲಿನ್ ಅವರ ನಿವಾಸದ ಮೇಲೂ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದರು. ಯುಪಿಎ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದ ಎರಡನೇ ದಿನವೇ ಈ ದಾಳಿ ನಡೆದದ್ದು ಡಿಎಂಕೆಗೆ ಶಾಕಿಂಗ್ ನ್ಯೂಸ್ ಆಗಿತ್ತು. ಇನ್ನು ಸಿಬಿಐ ದಾಳಿಯಿಂದ ಸಿಟ್ಟಿಗೆದ್ದ ಸ್ಟಾಲಿನ್ ಇದು ರಾಜಕೀಯ ಸೇಡಿನ ದಾಳಿ ಎಂದಿದ್ದರು.