ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಬಿಜೆಪಿ 'ವಿಜಯ ಸಂಕಲ್ಪ ಯಾತ್ರೆ 'ನೀರಸ

ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ಧುಮುಕಿರುವ ಬಿಜೆಪಿ ಶುಕ್ರವಾರ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡ ವಿಜಯ ಸಂಕಲ್ಪ ಯಾತ್ರೆ...

Rashmi Kasaragodu
Updated On : 22 Mar 2013, 7:38 am

ಮೈಸೂರು: ವಿಧಾನಸಭಾ ಚುನಾವಣೆಯಪ್ರಚಾರಕ್ಕೆ ಧುಮುಕಿರುವ ಬಿಜೆಪಿ ಶುಕ್ರವಾರ ಮೈಸೂರಿನಮಹಾರಾಜ ಕಾಲೇಜುಮೈದಾನದಲ್ಲಿ ಹಮ್ಮಿಕೊಂಡ ವಿಜಯ ಸಂಕಲ್ಪ ಯಾತ್ರೆನೀರಸವಾಗಿದೆ. ಈ ಕಾರ್ಯಕ್ರಮದಲ್ಲಿ ಜನರಿಂದ ಧನಾತ್ಮಕಪ್ರತಿಕ್ರಿಯೆಯನ್ನು ಪಡೆಯುವಲ್ಲಿಯೂ ಬಿಜೆಪಿನಾಯಕರು ವಿಫಲರಾಗಿದ್ದಾರೆ.

ಒಟ್ಟಾರೆ ಬಿಜೆಪಿ ನಾಯಕರಿಗೆಹಾಗು ಬಿಜೆಪಿಕಾರ್ಯಕರ್ತರಿಗೆ ವಿಜಯ ಸಂಕಲ್ಪ ಯಾತ್ರೆ ನೀರಸವಾಗಿತ್ತು.1999ರಲ್ಲಿ ಎನ್‌ಡಿಎ ಮೂಲಕ ಜನಾದೇಶ ಯಾತ್ರೆಕೈಗೊಂಡಿದ್ದ ಬಿಜೆಪಿ, ಹಾಗು 2007ರ ಚುನಾವಣಾಪ್ರಚಾರಕ್ಕೆ ಹೋಲಿಸಿದರೆ ಶುಕ್ರವಾರ ನಡೆದ ಕಾರ್ಯಕ್ರಮಚೈತನ್ಯರಹಿತವಾಗಿತ್ತು. ಬೆಳಗ್ಗೆ 11ಗಂಟೆಗೆ ಆರಂಭವಾಗಬೇಕಾಗಿದ್ದಕಾರ್ಯಕ್ರಮ ಮಧ್ಯಾಹ್ನ 12.30ಕ್ಕೆ ಆರಂಭವಾದಾಗಲೂ ಕುರ್ಚಿಗಳುಖಾಲಿ ಖಾಲಿಯಾಗಿಯೇಇದ್ದವು.

ಆದಾಗ್ಯೂ, ಸಿಎಂ ಜಗದೀಶ್ಶೆಟ್ಟರ್, ನೂತನ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿಮತ್ತು ಅನಂತಕುಮಾರ್ ಅವರುಭಾಷಣ ಮಾಡುತ್ತಿದ್ದರೆಅಲ್ಲಿ ನೆರದಿದ್ದಜನರು ಊಟದಕೌಂಟರ್ ಕಡೆಓಡೋಡಿ ಹೋಗುತ್ತಿರುವದೃಶ್ಯ ಕಂಡುಬಂತು. ನಾಯಕರಭಾಷಣ ಮುಗಿಯುವವರೆಗೆ ಕುಳಿತುಕೊಳ್ಳಿಎಂದು ಸ್ವಯಂಸೇವಕರುಮನವಿ ಮಾಡಿದರೂಕಾರ್ಯಕ್ರಮಕ್ಕೆ ಆಗಮಿಸಿದ್ದ ಜನರು ಪಲಾವ್, ಮೊಸರನ್ನಪಡೆಯಲು ಆತುರದಿಂದಮುನ್ನುಗ್ಗುತ್ತಿದ್ದರು.

Advertisement

Advertisement

ಊಟದ ಕೌಂಟರ್ ಪಕ್ಕಜನರನ್ನು ನಿಯಂತ್ರಿಸಲು ಸ್ವಯಂ ಸೇವಕರು ಹರಸಾಹಸ ಪಡುತ್ತಿದ್ದರೆಇತ್ತ ವೇದಿಕೆಯಲ್ಲಿಯೂಅವ್ಯವಸ್ಥೆ ಕಂಡು ಬಂತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿಉದ್ಘಾಟಿಸಲು ನಾಯಕರು ಬೆಂಕಿ ಕಡ್ಡಿ ಗೀರಿದಾಗಅದೂ ಕೈಕೊಟ್ಟಿತು. ವೇದಿಕೆಯ ಮೇಲೆ ನಿಂತು ನಾಯಕರುಬೆಂಕಿ ಕಡ್ಡಿಗೀರಿ ದೀಪಹಚ್ಚಲು ಶತಾಯಗತಾಯಪ್ರಯತ್ನ ಪಡುತ್ತಿರುವುದನ್ನು ನೋಡಿ,ಪ್ರೇಕ್ಷಕರೊಬ್ಬರು ಬೆಂಕಿಪೊಟ್ಟಣವನ್ನು ನೀಡಿದರು. ತದನಂತರ ದೀಪ ಬೆಳಗಿಸಿಉದ್ಘಾಟನೆ ಮಾಡಲಾಯಿತು.

ಇಷ್ಟೆಲ್ಲಾ ಆದ ಮೇಲೆನಾಯಕರು ಭಾಷಣಮಾಡುತ್ತಿದ್ದರೆ, ಮೈಕ್ ಕೂಡಾಸರಿಯಿರಲಿಲ್ಲ. ಪೋಡಿಯಂನಲ್ಲಿರಿಸಿದ್ದ ಮೈಕ್ಆವಾಗಾವಾಗ ಬೀಳುತ್ತಿದ್ದು, ಅದನ್ನುಸರಿಪಡಿಸುತ್ತಾ ನಾಯಕರು ಭಾಷಣಗೈಯ್ಯಬೇಕಾದಪರಿಸ್ಥಿತಿ ಬಂದೊದಗಿತ್ತು.

ಇನ್ನು ಭಾಷಣಗೈದ ನಾಯಕರುಕೂಡಾ ಯಾವುದೇಹೋಂವರ್ಕ್ ಮಾಡದೆ ಬಂದಿರುವುದರಿಂದ ತಮ್ಮ ಮನಸ್ಸಿಗೆತೋಚಿದ್ದನ್ನು ಹೇಳುತ್ತಾ ಮುಖ್ಯ ವಿಷಯವನ್ನೇ ಮರೆತಂತಿತ್ತು.ಹೆಚ್ಚಿನವರು ತಮ್ಮ ಭಾಷಣದ ಸಮಯವನ್ನು ಕೆಜೆಪಿಮತ್ತು ಯಡಿಯೂರಪ್ಪಅವರನ್ನು ತೆಗಳಲು ಬಳಸಿಕೊಂಡರು.

ಅದರಲ್ಲಿಯೂ ಕೆಲವರು ಕೆಜೆಪಿಪಕ್ಷದ ಅಸ್ಥಿತ್ವದಬಗ್ಗೆ ಪ್ರಶ್ನಿಸಿದರೆಇನ್ನು ಕೆಲವರುಕಾಂಗ್ರೆಸ್ ನೇತಾರ ಸಿದ್ಧರಾಮಯ್ಯ ಅವರನ್ನು ತರಾಟೆಗೆತೆಗೆದುಕೊಂಡರು.

ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಗೊಂಡ ಪ್ರಹ್ಲಾದ್ ಜೋಷಿಯವರ ಮೊದಲಸಾರ್ವಜನಿಕ ಕಾರ್ಯಕ್ರಮ ಇದಾಗಿತ್ತು.ಈ ಕಾರ್ಯಕ್ರಮದಲ್ಲಿಜೋಷಿಯವರು ಕೆಜೆಪಿ ವಿರುದ್ದ ಕಿಡಿಕಾರಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ಮತ್ತು ಕಾಂಗ್ರೆಸ್ನಡುವೆಯೇ ಸಮರ ನಡೆಯಲಿದೆ. ಇನ್ನಿತರ ಪಕ್ಷಗಳುಏನಿದ್ದರೂ ಇದ್ದೂ ಇಲ್ಲದಂತಿವೆ ಎಂದು ಹೇಳಿದ್ದಾರೆ.

ಏತನ್ಮಧ್ಯೆ, ಬಿಎಸ್‌ವೈ ವಿರುದ್ಧಟೀಕಾಪ್ರಹಾರ ನಡೆಸಿದ ಜೋಷಿ, ರಾಜ್ಯದಲ್ಲಿ ಕೆಜೆಪಿಕಾಂಗ್ರೆಸ್ ಪಕ್ಷದ ಬಿ-ಟೀಂ ಇದ್ದಂತೆ. ಈಚುನಾವಣೆಯಲ್ಲಿ ಬಿಎಸ್‌ವೈಗೆ ತಾವು ಗೆಲ್ಲುವುದು ಮುಖ್ಯವಲ್ಲ,ಬಿಜೆಪಿ ಪರಾಭವಗೊಳ್ಳುವುದೇಮುಖ್ಯ ಎಂದು  ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement