ಯಾಕೂಬ್ ಮೆಮನ್ಗೆ ಜೈಲಿನಲ್ಲಿ ಬಿಗಿ ಭದ್ರತೆ
1993 ಮುಂಬೈ ಸರಣಿ ಬಾಂಬ್ ಸ್ಫೋಟದ ಆರೋಪಿ ನಾಗ್ಪುರ್ ಸೆಂಟ್ರಲ್ ಜೈಲಿನಲ್ಲಿರುವ ಯಾಕೂಬ್ ಅಬ್ದುಲ್ ರಜಾಕ್ ಮೆಮನ್ಗೆ...
ನಾಗ್ಪುರ್: 1993 ಮುಂಬೈ ಸರಣಿ ಬಾಂಬ್ ಸ್ಫೋಟದ ಆರೋಪಿ ನಾಗ್ಪುರ್ ಸೆಂಟ್ರಲ್ ಜೈಲಿನಲ್ಲಿರುವ ಯಾಕೂಬ್ ಅಬ್ದುಲ್ ರಜಾಕ್ ಮೆಮನ್ಗೆ ಸುಪ್ರೀಂ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದನಂತರ ಈತನಿಗೆ ಜೈಲಿನಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ.
ಬಾಂಬ್ ಸ್ಫೋಟ ಪ್ರಕರಣದ ಇನ್ನೂ ಮೂವರು ಆರೋಪಿಗಳು ಅದೇ ಜೈಲಿನಲ್ಲಿದ್ದು, ಅವರೊಂದಿಗೆ ಸಂಪರ್ಕ ಕಲ್ಪಿಸದಂತೆ ಮೆಮನ್ರನ್ನು ನಿರ್ಬಂಧಿಸಲಾಗಿದೆ. ಮಾತ್ರವಲ್ಲದೆ ಶಿಕ್ಷೆ ಘೋಷಣೆಯಾದ ನಂತರ ಆತನನ್ನು ವಿಶೇಷ ಸೆಲ್ನಲ್ಲಿರಿಸವಾಗಿದೆ.
ಬಂಧಿತನಾಗಿರುವ ಯಾಕೂಬ್ ಮೆಮನ್, ಇದೀಗ ತಲೆಮರೆಸಿಕೊಂಡಿರುವ ಟೈಗರ್ ಮೆಮನ್ ಎಂದೇ ಕರೆಯಲ್ಪಡುವ ಡಾನ್ ಇಬ್ರಾಹಿಂನ ಸಹೋದರನಾಗಿದ್ದಾನೆ. ಟೈಗರ್ ಮೆಮನ್ಗೆ ಈ ಪ್ರಕರಣದಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿದೆ.
ಪ್ರಸ್ತುತ ಪ್ರಕರಣದಲ್ಲಿ ಮರಣದಂಡನೆ ವಿಧಿಸಿದ್ದ 10 ಮಂದಿಯ ಮೇಲ್ಮನವಿಯನ್ನು ಸ್ವೀಕರಿಸಿದ ಸುಪ್ರೀಂ, ನಿನ್ನೆ ಈ 10 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.