ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸಂಜಯ್ ದತ್ ನೊಂದಿದ್ದು ಸಾಕು, ಬಿಟ್ಬಿಡಿ: ಜಯಾ ಬಚ್ಚನ್

1993ರ ಮುಂಬೈ ಸರಣಿ ಸ್ಫೋಟ ಪ್ರಕರಣ ಸಂಬಂಧ ಐದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ನಟ ಸಂಜಯ್ ದತ್ ಅವರನ್ನು ಬಾಲಿವುಡ್‌ನ..

Lingaraj Badiger
Updated On : 22 Mar 2013, 4:19 am

ನವದೆಹಲಿ: 1993ರ ಮುಂಬೈ ಸರಣಿ ಸ್ಫೋಟ ಪ್ರಕರಣ ಸಂಬಂಧ ಐದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ನಟ ಸಂಜಯ್ ದತ್ ಅವರನ್ನು ಬಾಲಿವುಡ್‌ನ ಹಲವು ಮಂದಿ ಬಹಿರಂಗವಾಗಿಯೇ ಬೆಂಬಲಿಸುತ್ತಿದ್ದಾರೆ.

ಹಿರಿಯ ನಟಿ ಹಾಗೂ ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಅವರು, 'ನಾನು ವೈಯಕ್ತಿಕವಾಗಿ ರಾಜ್ಯಪಾಲರನ್ನು ಭೇಟಿ ಮಾಡಿ ಸಂಜಯ್ ದತ್ ಅವರು ಸಾಕಷ್ಟು ನೊಂದಿದ್ದು, ಇನ್ನುಮುಂದೆ ಅವರು ನೋವು ಅನುಭವಿಸುವುದು ಬೇಡ, ಅವರನ್ನು ಬಿಡುಗಡೆ ಮಾಡಿ' ಎಂದು ಕೋರುವುದಾಗಿ ಹೇಳಿದ್ದಾರೆ.

ದತ್ ಅವರು ಇಂದು ತಮ್ಮ ಶಿಕ್ಷೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮರು ಪರಿಶೀಲನಾ ಅರ್ಜಿ ಸಲ್ಲಿಸಲಿದ್ದು, ಒಂದು ವೇಳೆ ಮರು ಪರಿಶೀಲನಾ ಅರ್ಜಿ ವಜಾಗೊಂಡರೆ, ಕ್ಯುರೆಟಿವ್ ಅರ್ಜಿ ಸಲ್ಲಿಸುವ ಅವಕಾಶವಿದೆ. ಒಂದು ವೇಳೆ ಅದು ಸಹ ವಜಾಗೊಂಡರೆ, ಕೊನೆಯದಾಗಿ ಶಿಕ್ಷೆಯನ್ನು ಪರಿಶೀಲಿಸುವಂತೆ ಮಹಾರಾಷ್ಟ್ರ ರಾಜ್ಯಪಾಲರಲ್ಲಿ ಅವರು ಮನವಿ ಮಾಡಬಹುದು.

ಬಾಲವುಡ್‌ನ ಹಲವು ಮಂದಿ ಸಂಜಯ್ ದತ್ ಅವರ ಬೆಂಬಲಕ್ಕೆ ನಿಂತಿದ್ದು, ಅವರು ಸಾವಿರಾರು ಅಭಿಮಾನಿಗಳು ಸಹ ಬಿಡುಗಡೆಗಾಗಿ ಹಲವು ಧಾರ್ಮಿಕ ಕೇಂದ್ರಗಳಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

2006ರಲ್ಲಿ ಅಕ್ರಮವಾಗಿ 9ಎಂಎಂ ಪಿಸ್ತೂಲ್ ಹಾಗೂ ಎಕೆ 56 ರೈಫಲ್ ಹೊಂದಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸಂಜಯ್ ದತ್ ಅವರನ್ನು ಬಂಧಿಸಿಲಾಗಿತ್ತು. ನಂತರ ದತ್ ಅವರು 2007ರಲ್ಲಿ ಟಾಡಾ ಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲದೆ ಜಾಮೀನು ಸಹ ಪಡೆದುಕೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement