ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕಾಂಗ್ರೆಸ್ ಸಿಬಿಐ ಅನ್ನು ದುರ್ಬಳಕೆ ಮಾಡಿದೆ: ಹಜಾರೆ

ಕಾಂಗ್ರೆಸ್ ಕೇಂದ್ರ ತನಿಖಾ ಸಂಸ್ಥೆ (ಸಿಬಿಐ)ನ್ನು ದುರ್ಬಳಕೆ ಮಾಡಿದೆ ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಆರೋಪಿಸಿದ್ದಾರೆ...

Rashmi Kasaragodu
Updated On : 23 Mar 2013, 6:04 am

ಪುಣೆ: ಕಾಂಗ್ರೆಸ್ ಕೇಂದ್ರ ತನಿಖಾ ಸಂಸ್ಥೆ (ಸಿಬಿಐ)ನ್ನು ದುರ್ಬಳಕೆ ಮಾಡಿದೆ ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಆರೋಪಿಸಿದ್ದಾರೆ.

ಯುಪಿಎ ಸರ್ಕಾರಕ್ಕೆ ನೀಡಿರುವ ಬೆಂಬಲ ವಾಪಸ್ ಪಡೆದ ನಂತರ ಡಿಎಂಕೆ ನೇತಾರ ಎಂ. ಕೆ ಸ್ಟಾಲಿನ್ ಅವರ ನಿವಾಸಕ್ಕೆ ಸಿಬಿಐ ದಾಳಿ ನಡೆಸಿರುವ ಬಗ್ಗೆ  ಮಾತನಾಡಿದ ಹಜಾರೆ, ಸಿಬಿಐ ಸರ್ಕಾರದ ಕೈ ಕೆಳಗೆ ಕೆಲಸ ನಿರ್ವಹಿಸುತ್ತದೆ ಎಂದು ಎಲ್ಲರಿಗೂ ಗೊತ್ತು. ಸಿಬಿಐ ಅನ್ನು ಕೂಡಾ ಲೋಕಪಾಲದ ವ್ಯಾಪ್ತಿಗೆ ತಂದರೆ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬಹುದು ಎಂದು ಅವರು ಹೇಳಿದ್ದಾರೆ.

ಏತನ್ಮಧ್ಯೆ, ಸಿಬಿಐ ನಲ್ಲಿ ದಕ್ಷ ಅಧಿಕಾರಿಗಳು ಇದ್ದರೂ ಕಾಂಗ್ರೆಸ್ ಪಕ್ಷ ಸಿಬಿಐ ಅನ್ನು ಸದಾ ದುರ್ಬಳಕೆ ಮಾಡಿಕೊಂಡೇ ಬಂದಿದೆ ಎಂದು ಹಜಾರೆ ಆರೋಪಿಸಿದ್ದಾರೆ.

ಇದರರ್ಥ ಸಿಬಿಐಯಲ್ಲಿರುವ ಎಲ್ಲರೂ ಕೆಟ್ಟವರು ಎಂಬುದಲ್ಲ, ಆದರೆ ಅವರ ಮೇಲೆ ಒತ್ತಡ ಹೇರಲಾಗುತ್ತದೆ ಎಂದು ಹಜಾರೆ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement