ಕೃಷ್ಣ ಮೃಗ ಬೇಟೆ: ಸೈಫ್, ಸಲ್ಮಾನ್ ವಿರುದ್ಧ ದೋಷಾರೋಪ
ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ ಜೋಧಾಪುರ್ ನ್ಯಾಯಾಲಯ ಬಾಲಿವುಡ್ ನಟ ಸೈಫ್ ಅಲಿ ಖಾನ್, ನಟಿ ಟಬು, ನೀಲಂ...
ದೆಹಲಿ: ಕೃಷ್ಣ ಮೃಗಬೇಟೆ ಪ್ರಕರಣದಲ್ಲಿಜೋಧಾಪುರ್ ನ್ಯಾಯಾಲಯ ಬಾಲಿವುಡ್ ನಟ ಸೈಫ್ಅಲಿ ಖಾನ್,ನಟಿ ಟಬು,ನೀಲಂ ಮತ್ತುಸೋನಾಲಿ ಬೇಂದ್ರೆವಿರುದ್ಧ ಪರಿಷ್ಕೃತ ದೋಷಾರೋಪ ಮಾಡಿದೆ.
1998ರಲ್ಲಿ ಈ ಐವರು ಬಾಲಿವುಡ್ ನಟರ ವಿರುದ್ಧ ಕೇಸು ದಾಖಲಿಸಲಾಗಿತ್ತು.
14 ವರ್ಷಗಳ ಹಿಂದೆ 'ಹಮ್ ಸಾಥ್ ಸಾಥ್ ಹೈ 'ಚಿತ್ರ ಶೂಟಿಂಗ್ ನಡೆಯುತ್ತಿದ್ದ ವೇಳೆ ಈ ಐವರ ನಟ/ನಟಿಯರು ಜೋಧಪುರ್ ಬಳಿಯ ಗ್ರಾಮವೊಂದರಲ್ಲಿ ಕೃಷ್ಣ ಮೃಗ ಬೇಟೆಯಾಡಿದ್ದರು. ಆವಾಗಲೇ ಇವರ ವಿರುದ್ಧ ಕೇಸು ದಾಖಲಿಸಲಾಗಿತ್ತು,
ವನ್ಯಜೀವ ಸಂರಕ್ಷಣೆ ಕಾಯ್ದೆಯ ಪ್ರಕಾರ ಕೃಷ್ಣ ಮೃಗ ಸಂರಕ್ಷಿತ ಪ್ರಾಣಿಯಾಗಿದ್ದು, ಅದನ್ನು ಕಳ್ಳಬೇಟೆಯಾಡುವುದಾಗಲೀ, ಬೇಟೆಯಾಡುವುದಾಗಲೀ ಮಾಡಿದರೆ ಭಾರತೀಯ ಕಾನೂನು ಪ್ರಕಾರ ಶಿಕ್ಷೆಗೊಳಪಡಿಸಲಾಗುತ್ತದೆ.
ಶನಿವಾರ ಪ್ರಸ್ತುತ ಪ್ರಕರಣದಲ್ಲಿ ಸಿಲುಕಿರುವ ಎಲ್ಲ ನಟರು ನ್ಯಾಯಾಲಯದಲ್ಲಿ ವಿಚಾರಣೆಗೆ ಆಗಮಿಸಿದ್ದು, ಸಲ್ಮಾನ್ ಖಾನ್ ಗೈರು ಹಾಜರಾಗಿದ್ದಾರೆ.
ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ಚಂದ್ರಕಲಾ ಜೈನ್ ವನ್ಯ ಜೀವಿ ಸಂರಕ್ಷಣಾ ಕಾಯ್ದೆಯ 9/51 ಮತ್ತು 9/51 ಪರಿಚ್ಛೇದದಡಿಯಲ್ಲಿ ಮತ್ತು ಭಾರತೀಯ ದಂಡ ಸಂಹಿತೆಯೆ ವಿಭಾಗ 149ರಡಿಯಲ್ಲಿ ಈ ನಟರ ವಿರುದ್ಧ ಕೇಸು ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಮುಂದಿನ ವಿಚಾರಣೆ ಏಪ್ರಿಲ್ 27ಕ್ಕೆ ನಡೆಯಲಿದೆ.
ಆದಾಗ್ಯೂ, ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಈ ನಟರು ಹೇಳಿದ್ದಾರೆ.