ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಚಾಂದ್ನಿ ಚೌಕ್ ದಾಳಿಗೆ ಹಿಜ್ಬುಲ್ ಉಗ್ರರ ಸಂಚು!

ಗೋರಖ್‌ಪುರ್‌ನಲ್ಲಿ ಬಂಧಿತನಾದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಸದಸ್ಯ ಸಯ್ಯದ್ ಲಿಯಾಖತ್ ಷಾ ದಕ್ಷಿಣ ದೆಹಲಿ...

Rashmi Kasaragodu
Updated On : 23 Mar 2013, 5:03 am

ನವದೆಹಲಿ: ಗೋರಖ್‌ಪುರ್‌ನಲ್ಲಿ ಬಂಧಿತನಾದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಸದಸ್ಯ ಸಯ್ಯದ್ ಲಿಯಾಖತ್ ಷಾ ದಕ್ಷಿಣ ದೆಹಲಿಯ ಮಾಲ್ ಹಾಗು ಚಾಂದ್ನಿ ಚೌಕ್ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದನು ಎಂದು ಪೊಲೀಸರು ಹೇಳಿದ್ದಾರೆ.

ಬಂಧಿತ ಉಗ್ರ ಪಾಕ್ ಸ್ವಾಧೀನ ಕಾಶ್ಮೀರದಲ್ಲಿ ತರಬೇತಿ ಪಡೆದಿದ್ದು, ಈತ ಹೋಳಿ ಹಬ್ಬದ ವೇಳೆ ದಕ್ಷಿಣ ದೆಹಲಿಯ ಮಾಲ್ ಮತ್ತು ಹಳೆ ದೆಹಲಿಯ ಚಾಂದ್ನಿ ಚೌಕ್ ಮೇಲೆ ದಾಳಿ ನಡೆಸಲು ತಂತ್ರ ರೂಪಿಸಿದ್ದನು.

ಈತನಿಂದ ಈ ಮಾಹಿತಿಗಳನ್ನು ತಿಳಿದುಕೊಂಡ ನಂತರ ಪೊಲೀಸರು ಇನ್ನಿತರ ಆರು ಶಂಕಿತ ಉಗ್ರರನ್ನು ಪತ್ತೆ ಹಚ್ಚಲು ಜಾಲ ಬೀಸಿದ್ದಾರೆ.

ಈ ಉಗ್ರನಿಂದ ಸಂಗ್ರಹಿಸಿದ ಮಾಹಿತಿಯನ್ನು ಬಳಸಿ ದೆಹಲಿ ಪೊಲೀಸರ ವಿಶೇಷ ಪಡೆ ದೆಹಲಿಯ ಜಮಾ ಮಸೀದಿಯ ಪಕ್ಕದಲ್ಲಿರುವ ಅತಿಥಿ ಗೃಹಕ್ಕೆ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಎಕೆ 47, ಹ್ಯಾಂಡ್ ಗ್ರೆನೇಡ್‌ಗಳು, 60 ಸ್ಫೋಟಕಗಳು  ಹಾಗು ಜಮಾ ಮಸೀದಿ ಪ್ರದೇಶದ ಕೆಲವೊಂದು ಭೂಪಟಗಳು ಪತ್ತೆಯಾಗಿವೆ.

ಶಂಕಿತ ಉಗ್ರ ಲಿಯಾಖತ್ ಷಾ (47) ಕಾಶ್ಮೀರದ ಸೋಪೋರ್ ನಿವಾಸಿಯಾಗಿದ್ದಾನೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ ಈತ ಪಾಕಿಸ್ತಾನದಿಂದ ಕಾಠ್ಮಂಡು ಮೂಲಕ ಗೋರಖ್‌ಪುರಕ್ಕೆ ಬಂದಿದ್ದು, ಅಲ್ಲಿ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement