ನಗರದಲ್ಲಿ ಹಾಡಹಗಲೇ ಜ್ಯುವೆಲ್ಲರಿ ಶಾಪ್ ಮಾಲೀಕನ ಹತ್ಯೆ
ಇಲ್ಲಿನ ರಾಜಾಜಿನಗರದಲ್ಲಿರುವ ವೃಷಭ್ ಜ್ಯುವೆಲ್ಲರಿ ಶಾಪ್ನ ಮಾಲೀಕನನ್ನು ದುಷ್ಕರ್ಮಿಗಳು ಹಾಡಹಗಲೇ ಹತ್ಯೆಗೈದ ಘಟನೆ ಶನಿವಾರ...
ಬೆಂಗಳೂರು: ಇಲ್ಲಿನ ರಾಜಾಜಿನಗರದಲ್ಲಿರುವ ವೃಷಭ್ ಜ್ಯುವೆಲ್ಲರಿ ಶಾಪ್ನ ಮಾಲೀಕನನ್ನು ದುಷ್ಕರ್ಮಿಗಳು ಹಾಡಹಗಲೇ ಹತ್ಯೆಗೈದ ಘಟನೆ ಶನಿವಾರ ನಡೆದಿದೆ.
ವೃಷಭ್ ಜ್ಯುವೆಲ್ಲರಿ ಶಾಪ್ ಮಾಲೀಕ ಶ್ರವಣಕುಮಾರ್ (45) ಅಂಗಡಿಯಲ್ಲಿ ವ್ಯಾಪಾರ ನಡೆಸುತ್ತಿದ್ದ ವೇಳೆ ಅಲ್ಲಿಗೆ ನುಗ್ಗಿದ ದುಷ್ಕರ್ಮಿಗಳು ಈತನನ್ನು ಕೊಚ್ಚಿ ಕೊಲೆಗೈದಿದ್ದಾರೆ.
ಬೆಂಗಳೂರಿನ ಭಾಷ್ಯಂ ವೃತ್ತದಲ್ಲಿ ಹತ್ಯೆ ನಡೆದಿದ್ದು, ಈ ಹತ್ಯೆಗೆ ಕಾರಣವೇನೆಂಬುದು ತಿಳಿದು ಬಂದಿಲ್ಲ.
ಸ್ಥಳಕ್ಕೆ ಭೇಟಿ ನೀಡಿದ ರಾಜಾಜಿನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.