ಭ್ರಷ್ಟಾಚಾರಕ್ಕೆ ಕಾಂಗ್ರೆಸ್ ಕಾರಣ: ಮುಲಾಯಂ
ದೇಶದಲ್ಲಿ ಭ್ರಷ್ಟಾಚಾರ ಹೆಚ್ಚಲು ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ...
ಲಕ್ನೋ: ದೇಶದಲ್ಲಿ ಭ್ರಷ್ಟಾಚಾರ ಹೆಚ್ಚಲು ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಆರೋಪಿಸಿದ್ದಾರೆ.
ಲಂಕಾ ತಮಿಳರ ವಿಷಯಕ್ಕೆ ಸಂಬಂಧಿಸಿ ಕರುಣಾನಿಧಿ ನೇತೃತ್ವದ ಡಿಎಂಕೆ ಯುಪಿಎ ಸರ್ಕಾರದಿಂದ ಬೆಂಬಲ ಹಿಂತೆಗೆದುಕೊಂಡ ನಂತರ ಮುಲಾಯಂ ಈ ರೀತಿ ಆರೋಪ ಹೊರಿಸಿರುವುದು ಕಾಂಗ್ರೆಸ್ಗೆ ಅಚ್ಚರಿಯನ್ನುಂಟು ಮಾಡಿದೆ.
ಯಾಕೆಂದರೆ ಡಿಎಂಕೆ ಬೆಂಬಲ ವಾಪಸ್ ತೆಗೆದುಕೊಂಡ ನಂತರ ಯುಪಿಎ ಸರ್ಕಾರ ಪ್ರಾದೇಶಿಕ ಪಕ್ಷಗಳಾದ ಮುಲಾಯಂ ಸಿಂಗ್ರ ಸಮಾಜವಾದಿ ಪಕ್ಷ ಮತ್ತು ಮಾಯಾವತಿಯವರ ಬಹುಜನ್ ಸಮಾಜ ಪಕ್ಷದ ಬೆಂಬಲದಲ್ಲಿ ಸ್ಥಿರವಾಗಿದೆ.
ಅದೇ ವೇಳೆ ಅಖಿಲೇಶ್ ಯಾದವ್ ತನ್ನ ಸಂಪುಟ ಸಚಿವರಿಂದ ಸರಿಯಾಗಿ ಕೆಲಸ ಮಾಡಿಸಿಕೊಳ್ಳಲು ವಿಫಲರಾದರೆ ಮುಂದಿನ ಬಾರಿ ಅಧಿಕಾರಕ್ಕೇರುವುದು ಕಷ್ಟವಿದೆ ಎಂದು ಮುಲಾಯಂ ತಮ್ಮ ಪುತ್ರನಿಗೆ ಕಿವಿಮಾತು ಹೇಳಿದ್ದಾರೆ.
ಬಿಜೆಪಿಯ ಹಿರಿಯ ನೇತಾರ ಎಲ್.ಕೆ ಆಡ್ವಾಣಿ ಉತ್ತರ ಪ್ರದೇಶದ ಆಡಳಿತದ ಬಗ್ಗೆ ಮುಲಾಯಂ ಅವರಲ್ಲಿ ವೈಯಕ್ತಿಕವಾಗಿ ದೂರು ಹೇಳಿದ್ದು, ಹಿರಿಯರ ಮಾತನ್ನು ಕೇಳಬೇಕಾಗಿದೆ ಎಂದು ಮುಲಾಯಂ ಅಖಿಲೇಶ್ಗೆ ಹೇಳಿದ್ದಾರೆ.