ಸಿಸಿಟಿವಿಯಲ್ಲಿ ಶಂಕಿತ ಉಗ್ರ ಸೆರೆ
ಸ್ಫೋಟಕ ವಸ್ತುಗಳು ಪತ್ತೆಯಾಗಿರುವ ಜಮಾ ಮಸೀದಿ ಬಳಿಯಿರುವ ಅತಿಥಿಗೃಹದಲ್ಲಿದ್ದ ಸಿಸಿಟಿವಿ ದೃಶ್ಯದಲ್ಲಿ ಶಂಕಿತ ಉಗ್ರನೊಬ್ಬ ಸೆರೆ...
ದೆಹಲಿ: ಸ್ಫೋಟಕ ವಸ್ತುಗಳು ಪತ್ತೆಯಾಗಿರುವ ಜಮಾ ಮಸೀದಿ ಬಳಿಯಿರುವ ಅತಿಥಿಗೃಹದಲ್ಲಿದ್ದ ಸಿಸಿಟಿವಿ ದೃಶ್ಯದಲ್ಲಿ ಶಂಕಿತ ಉಗ್ರನೊಬ್ಬ ಸೆರೆಯಾಗಿದ್ದಾನೆ.
ಸಿಸಿಟಿವಿ ದೃಶ್ಯದಲ್ಲಿ ಕಾಣುವ ಕಪ್ಪು ಟೋಪಿ ಧರಿಸಿರುವ ವ್ಯಕ್ತಿ ಶಂಕಿತ ಉಗ್ರನಾಗಿರಬಹುದೆಂದು ಊಹಿಸಲಾಗಿದೆ.
ಶನಿವಾರ ದೆಹಲಿ ಪೊಲೀಸರು ಬಿಡುಗಡೆ ಮಾಡಿದ ಈ ಸಿಸಿಟಿವಿ ದೃಶ್ಯಗಳಲ್ಲಿ ವ್ಯಕ್ತಿಯೊಬ್ಬ ಅತಿಥಿ ಗೃಹದ ಬುಕಿಂಗ್ ಕೌಂಟರ್ನಲ್ಲಿ ರೂಂ ಬಗ್ಗೆ ವಿಚಾರಿಸುವ ದೃಶ್ಯವಿದೆ.
ಈ ಅತಿಥಿ ಗೃಹದ 403 ನಂಬರ್ ಕೊಠಡಿಯಲ್ಲಿ ಇಬ್ಬರು ಶಂಕಿತ ಉಗ್ರರು ತಂಗಿದ್ದು, ಈ ಕೊಠಡಿಯಿಂದ ಪೊಲೀಸರು ಎಕೆ -47, ಹ್ಯಾಂಡ್ ಗ್ರೆನೇಡ್, 60 ಸುತ್ತಿನ ಸ್ಫೋಟಕಗಳು ಮತ್ತು ಕೆಲವು ಭೂಪಟಗಳನ್ನು ಪತ್ತೆ ಹಚ್ಚಿದ್ದಾರೆ.
ಈ ಉಗ್ರರು ಮಾರ್ಚ್ 27 (ಬುಧವಾರ) ಹೋಳಿ ಹಬ್ಬದ ದಿನ ಬಾಂಬ್ ಸ್ಫೋಟ ನಡೆಸಲು ಸಂಚು ರೂಪಿಸಿದ್ದರು ಎಂದು ಬಲ್ಲಮೂಲಗಳು ಹೇಳಿವೆ.