ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಅಟಾರ್ನಿ ಜನರಲ್ ವಾಹನ್ವತಿ ವಿರುದ್ಧ ರಾಜಾ ಕಿಡಿ

ಅಟಾರ್ನಿ ಜನರಲ್ ಜಿ.ಇ.ವಾಹನ್ವತಿ ವಿರುದ್ಧ ದೂರಸಂಪರ್ಕ ಖಾತೆ ಮಾಜಿ ಸಚಿವ ಎ.ರಾಜಾ ಕಿಡಿಕಾರಿದ್ದಾರೆ. ಜಂಟಿ ಸಂಸದೀಯ..

Lingaraj Badiger
Updated On : 24 Mar 2013, 4:51 am

ನವದೆಹಲಿ: ಅಟಾರ್ನಿ ಜನರಲ್ ಜಿ.ಇ.ವಾಹನ್ವತಿ ವಿರುದ್ಧ ದೂರಸಂಪರ್ಕ ಖಾತೆ ಮಾಜಿ ಸಚಿವ ಎ.ರಾಜಾ ಕಿಡಿಕಾರಿದ್ದಾರೆ. ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಸೇರಿದಂತೆ ಹಲವು ಹಂತಗಳಲ್ಲಿ ತಮ್ಮ ವಿರುದ್ಧ ಆರೋಪಗಳನ್ನು ಮಾಡಿರುವುದನ್ನು ಅವರು ಖಂಡಿಸಿದ್ದಾರೆ.

2ಜಿ ಸ್ಪೆಕ್ಟ್ರಂ ಹಗರಣದ ಬಗ್ಗೆ ತನಿಖೆ ನಡೆಸುತ್ತಿರುವ ಜೆಪಿಸಿಗೆ ಕಳುಹಿಸಿರುವ 17 ಪುಟಗಳ ಹೇಳಿಕೆಯಲ್ಲಿ ರಾಜ ಈ ಹೇಳಿಕೆ ನೀಡಿದ್ದಾರೆ. ಖುದ್ದಾಗಿ ಸಮಿತಿ ಮುಂದೆ ಹಾಜರಾಗಲು ಅಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಸಮಿತಿ ಕಳುಹಿಸಿದ್ದ ಪ್ರಶ್ನಾವಳಿಗೆ ಅವರು ಉತ್ತರ ನೀಡಿದ್ದರು. ಸ್ಪೆಕ್ಟ್ರಂ ಹಂಚಿಕೆಯ ಪರವಾನಗಿ ವಿಚಾರ ಪ್ರಧಾನಿ ಮತ್ತು ಉನ್ನತಾಧಿಕಾರದ ಸಚಿವರ ಸಮಿತಿ ಮುಖ್ಯಸ್ಥರಾಗಿದ್ದ ಪ್ರಣಬ್ ಮುಖರ್ಜಿಯವರಿಗೂ ಮಾಹಿತಿ ಕೊಟ್ಟಿದ್ದಾಗಿ ರಾಜಾ ಪ್ರತಿಪಾದಿಸಿದ್ದಾರೆ.

ಚರ್ಚೆ ನಡೆಸಿದ್ದೆ: 2007ರ ನ.2ರಂದು ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಉನ್ನಾತಾಧಿಕಾರದ ಸಚಿವರ ಸಮಿತಿ ಮುಖ್ಯಸ್ಥರಾಗಿದ್ದ ಪ್ರಣಬ್ ಮುಖರ್ಜಿ ಜತೆ ಸ್ಪೆಕ್ಟ್ರಂ ಪರವಾನಗಿ ಬಗ್ಗೆ ಚರ್ಚೆ ನಡೆಸಿದ್ದಾಗಿ ರಾಜಾ ತಿಳಿಸಿದ್ದಾರೆ. ಈ ಚರ್ಚೆ ವೇಳೆ ಸಾಲಿಸಿಟರ್ ಜನರಲ್ ಆಗಿದ್ದ ಜಿ.ಇ.ವಾಹನ್ವತಿ ಕೂಡ ಉಪಸ್ಥಿತರಿದ್ದರು ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement