ಆಸೀಸ್ ವಿರುದ್ಧ ಕ್ಲೀನ್ಸ್ವೀಪ್ ಸಾಧಿಸಿದ ಭಾರತ
ಟೆಸ್ಟ್ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಸಿರುವ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಗವಾಸ್ಕರ್ - ಬಾರ್ಡ್ರ್ ಟೆಸ್ಟ್ ಸರಣಿಯಲ್ಲಿ ಭಾರತ 4-0 ಅಂತರದಲ್ಲಿ..
ನವದೆಹಲಿ: ಟೆಸ್ಟ್ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಸಿರುವ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಗವಾಸ್ಕರ್ - ಬಾರ್ಡ್ರ್ ಟೆಸ್ಟ್ ಸರಣಿಯಲ್ಲಿ ಭಾರತ 4-0 ಅಂತರದಲ್ಲಿ ಭರ್ಜರಿ ಜಯ ಸಾಧಿಸಿದೆ.
ಇಂದು ದೆಹಲಿಯ ನಡೆದ ಅಂತಿಮ ಹಾಗೂ ನಾಲ್ಕನೆ ಟೆಸ್ಟ್ನಲ್ಲೂ 6 ವಿಕೆಟ್ಗಳಿಂದ ಜಯ ಸಾಧಿಸುವ ಮೂಲಕ ಭಾರತ 66 ವರ್ಷಗಳ ನಂತರ ಐತಿಹಾಸಿಕ ಸಾಧನೆ ಮಾಡಿದೆ.
ಎರಡನೇ ಇನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ಕೇವಲು 164ಕ್ಕೆ ಆಲೌಟ್ ಆಗುವ ಮೂಲಕ, ಟೀಂ ಇಂಡಿಯಾಗೆ ಅತೀ ಕಡಿಮೆ 155ರನ್ಗಳ ಟಾರ್ಗೆಟ್ ನೀಡಿತ್ತು. ಕಡಿಮೆ ಮೊತ್ತದ ಗುರಿಯ ಬೆನ್ನು ಹತ್ತಿದ ಧೋನಿ ಪಡೆ, ಆರಂಭದಲ್ಲಿ ಮುರಳಿ ವಿಜಯ್ ವಿಕೆಟ್ ಕಳೆದುಕೊಂಡಿತು. 11ರನ್ ಗಳಿಸಿದ್ದ ವಿಜಯ್ ಮ್ಯಾಕ್ಸ್ವೆಲ್ ಬೌಲಿಂಗ್ನಲ್ಲಿ ಔಟಾದರು. ನಂತರ ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ ಪೂಜಾರ ಎರಡನೇ ವಿಕೆಟ್ಗೆ 104ರನ್ ಜೊತೆಯಾಟವಾಡಿ ಆಸೀಸ್ ಆಸೆಗೆ ತಣ್ಣೀರೆರಚಿದರು.
ಈಗಗಾಲೇ ಸತತ ಮೂರು ಪಂದ್ಯಗಳನ್ನು ಗೆದ್ದಿದ್ದ ಟೀಂ ಇಂಡಿಯಾ, ಅಂತಿಮ ಟೆಸ್ಟ್ನಲ್ಲೂ ಸುಲಭವಾಗಿ ಗೆಲುವ ಸಾಧಿಸಿದೆ. ಚೇತೇಶ್ವರ್ ಪೂಜಾರ ಅಜೇಯ 82 ರನ್, ಮುರಳಿ ವಿಜಯ್ 11, ವಿರಾಟ್ ಕೊಹ್ಲಿ 41, ಸಚಿನ್ ತೆಂಡೂಲ್ಕರ್ 1, ರಹಾನೆ 1, ಮಹೇಂದ್ರ ಸಿಂಗ್ ಧೋನಿ ಅಜೇಯ 12ರನ್ ಗಳಿಸಿದರು.
ಆಸೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 29 ವಿಕೆಟ್ ಪಡೆದ ರವಿಚಂದ್ರನ್ ಅಶ್ವಿನ್ ಅವರು ಸರಣಿಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ಇನ್ನು ನಾಲ್ಕನೇ ಪಂದ್ಯದಲ್ಲಿ ಮಿಂಚಿದ ರವೀಂದ್ರ ಜಡೇಜಾ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಪ್ರಥಮ ಇನಿಂಗ್ಸ್ನಲ್ಲಿ ಆಸ್ಟ್ರೇಲಿಯಾ 262ರನ್ ಗಳಿಸಿದ್ದರೆ, ಭಾರತ 272ರನ್ ಗಳಿಸಿತ್ತು.