ಉದಾಸಿ ಭಾರಿ ಭ್ರಷ್ಟಾಚಾರಿ: ಡಿವಿಎಸ್
ಬಿಜೆಪಿ ತೊರೆದು ಕೆಜೆಪಿ ಸೇರಿದ ಮಾಜಿ ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌದ..
ಹಾವೇರಿ: ಬಿಜೆಪಿ ತೊರೆದು ಕೆಜೆಪಿ ಸೇರಿದ ಮಾಜಿ ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌದ ಅವರು, ಉದಾಸಿ ಒಬ್ಬ ಭಾರಿ ಭ್ರಷ್ಟಾಚಾರಿ ಎಂದು ಭಾನುವಾರ ಆರೋಪಿಸಿದ್ದಾರೆ.
ನಾನು ಮುಖ್ಯಮಂತ್ರಿಯಾಗಿದ್ದಾಗ ನನ್ನ ಸಂಪುಟದಲ್ಲಿ ಸಚಿವರಾಗಿದ್ದ ಉದಾಸಿ ಅವರು, ಟೆಂಡರ್ನಲ್ಲಿ ಹಣ ಕೀಳುತ್ತಿದ್ದರು. ಆದರೆ ನಾನು ಅವರ ಅಕ್ರಮಕ್ಕೆ ಕಡಿವಾಣ ಹಾಕಿ, ಸಿಎಂ ಕುರ್ಚಿ ಕಳೆದುಕೊಂಡೆ ಎಂದು ಹೇಳಿದ್ದಾರೆ.
ಆದರೆ ಡೀವಿ ಅವರ ಆರೋಪವನ್ನು ನಿರಾಕರಿಸಿರುವ ಉದಾಸಿ, ಸಿಎಂ ಕುರ್ಚಿ ಕಳೆದುಕೊಂಡ ನಂತರ ಅವರಿಗೆ ಮತಿ ಭ್ರಮಣೆ ಆಗಿದೆ ಎಂದಿದ್ದಾರೆ. ಅಲ್ಲದೆ ತಮ್ಮ ವಿರುದ್ಧ ಭ್ರಷ್ಟಾಚಾರದ ದಾಖಲೆಗಳಿದ್ದರೆ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದಾರೆ.
ಸದಾನಂದಗೌಡರು ಮೊದಲು ಗೌರವದಿಂದ ಮಾತಾಡೋದನ್ನು ಕಲಿಯಲಿ ಎಂದು ಉದಾಸಿ ಕಿಡಿ ಕಾರಿದರು.