ಥೇನ್: ಎಟಿಎಸ್ ಅಧಿಕಾರಿ ಆತ್ಮಹತ್ಯೆ
ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ಹಿರಿಯ ಅಧಿಕಾರಿ ಕುಟುಂಬ ಸದಸ್ಯರ ಮುಂದೆಯೇ ಶೂಟ್ ಮಾಡಿಕೊಂಡು...
ಮಹಾರಾಷ್ಟ್ರ: ಮಾಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ಹಿರಿಯ ಅಧಿಕಾರಿ ಕುಟುಂಬ ಸದಸ್ಯರ ಮುಂದೆಯೇ ಶೂಟ್ ಮಾಡಿಕೊಂಡು ಸಾವನ್ನಪ್ಪಿದ ಘಟನೆ ಥೇನ್‌ನ ಪ್ರತಿಷ್ಠಿತ ಹೋಟೆಲ್‌ನಲ್ಲಿ ಸಂಭವಿಸಿದೆ.
ಪೊಲೀಸ್ ಉಪಆಯುಕ್ತ (ಡಿಸಿಪಿ) ಸಂಜಯ್ ಬ್ಯಾನರ್ಜಿ ಅವರು ತಮ್ಮ ಬಳಿ ಇದ್ದ ರಿವಾಲ್ವರನ್ನಲ್ಲಿ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಹಾರಾಷ್ಟ್ರ ಲೋಕಾಸೇವಾ ಆಯೋಗದಿಂದ ಆಯ್ಕೆಗೊಂಡು ಪೊಲೀಸ್ ಸೂಪರಿಂಟೆಂಡೆಟ್ ಆಗಿ ನೇಮಕಗೊಂಡಿದ್ದ ಸಂಜಯ್ ಬ್ಯಾನರ್ಜಿ ಅವರು, ಕಳೆದ ವರ್ಷ ಭಯೋತ್ಪಾದನ ನಿಗ್ರಹ ದಳದ ಉಪ ಆಯುಕ್ತರಾಗಿ ನಿಯುಕ್ತಿಗೊಂಡಿದ್ದರು.
ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳ ಮುಂದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗೋವಾದ ಥೇನ್‌ನಲ್ಲಿರುವ ಪೋರ್ಚುಗೀಸ್ ಹೋಟೆಲ್‌ಗೆ ಮದ್ಯಾಹ್ನದ ಉಪಹಾರಕ್ಕೆ ತೆರಳಿದ್ದರು. ಹೋಟೆಲ್‌ನಲ್ಲಿ ಪತ್ನಿಯೊಂದಿಗೆ ಮತಾನಾಡುತ್ತಿದ್ದಾಗ, ಇದ್ದಕ್ಕಿದ್ದಂತೆ ತಮ್ಮ ಬಳಿ ಇದ್ದ ರಿವಾಲ್ವರ್ ತೆಗೆದು ಶೂಟ್ ಮಾಡಿಕೊಂಡಿದ್ದಾರೆ. ಕ್ಷಣಾರ್ಧದಲ್ಲೇ ಘಟನೆ ಸಂಭವಿಸಿದ್ದು, ಪತ್ನಿ ಮತ್ತು ಮಕ್ಕಳಿಗೆ ಆಶ್ಚರ್ಯವಾಗಿದೆ.
ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರು ಅವರು ಪ್ರಾಣಾಪಾಯದಿಂದ ಪಾರಾಗಿಲ್ಲ. ಘಟನೆ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದು, ಪತ್ನಿಯ ಜೊತೆ ಜಗಳವಾಡಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.