ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಪಾಕ್‌ಗೆ ಮರಳಿದ ಮುಷರ್ರಫ್

ಉಗ್ರರಿಂದ ಜೀವ ಬೆದರಿಕೆ ಹಾಗೂ ಬಂಧನ ಭೀತಿಯ ನಡುವೆಯೇ ಪಾಕಿಸ್ತಾನದ ಮಾಜಿ ಅಧ್ಯಕ್ಷ ಫರ್ವೆಜ್ ಮುಷರ್ರಫ್ ಅವರು ನಾಲ್ಕು ವರ್ಷಗಳ ನಂತರ ..

Lingaraj Badiger
Updated On : 24 Mar 2013, 1:25 am

ಇಸ್ಲಾಮಾಬಾದ್: ಉಗ್ರರಿಂದ ಜೀವ ಬೆದರಿಕೆ ಹಾಗೂ ಬಂಧನ ಭೀತಿಯ ನಡುವೆಯೇ ಪಾಕಿಸ್ತಾನದ ಮಾಜಿ ಅಧ್ಯಕ್ಷ ಫರ್ವೆಜ್ ಮುಷರ್ರಫ್ ಅವರು ನಾಲ್ಕು ವರ್ಷಗಳ ನಂತರ ಭಾನುವಾರ ತಾಯಿನಾಡಿಗೆ ಮರಳಿದ್ದಾರೆ.

ಮುಷರ್ರಫ್ ಅವರು ಪಾಕ್ ಪ್ರಯಾಣ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ. 'ವಾಪಸ್ ನನ್ನ ಮನಗೆ ತೆರಳುವ ಪ್ರಯಾಣ ಆರಂಭವಾಗಿದ್ದು, ನಾನು ಈಗ ವಿಮಾನದ ನನ್ನ ಸೀಟ್‌ನಲ್ಲಿ ಕುಳಿತಿದ್ದೇನೆ ' ಎಂದು ಟ್ವೀಟ್ ಮಾಡಿದ್ದಾರೆ.

ನಾಲ್ಕು ವರ್ಷಗಳ ಕಾಲ ರಾಜಕೀಯ ದಿಂದ ದೂರ ಉಳಿದಿದ್ದ ಮುಷರ್ರಫ್‌ಗೆ ಅವರು ಇಂದು ಮಧ್ಯಾಹ್ನ 1 ಗಂಟೆಯ ಸುಮಾರಿಗೆ ದುಬೈಯಿಂದ ಕರಾಚಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಮೇ ತಿಂಗಳಲ್ಲಿ ಪಾಕ್‌ನಲ್ಲಿ ನಡೆಯಲಿರುವ ಮುಖ್ಯ ಚುನಾವಣೆ ಹಿನ್ನೆಲೆಯಲ್ಲಿ ಮುಷರ್ರಫ್ ಅವರು ದೇಶಕ್ಕೆ ಹಿಂತಿರುಗಿದ್ದಾರೆ.

ಮುಷರ್ರಫ್ ಏನಾದರೂ ಪಾಕ್‌ಗೆ ಕಾಲಿಟ್ಟರೆ ಅವರಿಗೆ ನರಕ ದರ್ಶನ ಮಾಡಿಸುವುದಾಗಿ ನಿನ್ನೆ ತಾಲಿಬಾನ್ ಉಗ್ರರು ಎಚ್ಚರಿಕೆ ನೀಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement