ರವೀಂದ್ರ ಜಡೇಜಾ ಪ್ರತಿಭಾವಂತ ಆಟಗಾರ: ಧೋನಿ
ಎಡಗೈ ಸ್ಪಿನ್ನರ್ ಹಾಗೂ ಬ್ಯಾಟ್ಸ್ಮನ್ ರವೀಂದ್ರ ಜಡೇಜಾ ಓರ್ವ ಪ್ರತಿಭಾವಂತ ಆಟಗಾರ ಎಂದು ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಹೇಳಿದ್ದಾರೆ.
ನವದೆಹಲಿ: ಎಡಗೈ ಸ್ಪಿನ್ನರ್ ಹಾಗೂ ಬ್ಯಾಟ್ಸ್ಮನ್ ರವೀಂದ್ರ ಜಡೇಜಾ ಓರ್ವ ಪ್ರತಿಭಾವಂತ ಆಟಗಾರ ಎಂದು ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಭಾನುವಾರ ಹೇಳಿದ್ದಾರೆ.
ಆಸೀಸ್ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಧೋನಿ, ಸ್ಪಿನ್ನರ್ಗಳ ಸಹಕಾರದಿಂದ ಗವಾಸ್ಕರ್ - ಬಾರ್ಡ್ರ್ ಟೆಸ್ಟ್ ಸರಣಿ ಭಾರತದ ಕೈ ವಶವಾಯಿತು ಎಂದಿದ್ದಾರೆ.
ಇಂದು ಆಸ್ಟ್ರೇಲಿಯಾ ವಿರುದ್ಧದ ಗವಾಸ್ಕರ್- ಬಾರ್ಡ್ರ್ ಟೆಸ್ಟ್ ಸರಣಿಯಲ್ಲಿ ಭಾರತ 4-0 ಅಂತರದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಭಾರತ 66 ವರ್ಷಗಳ ನಂತರ ಐತಿಹಾಸಿಕ ಸಾಧನೆ ಮಾಡಿದೆ.