ಗುದ್ದೋಡು ಪ್ರಕರಣ: ಸಲ್ಮಾನ್ ಖಾನ್ ವಿಚಾರಣೆ ಮುಂದೂಡಿಕೆ
2002ರ ಗುದ್ದೋಡು ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸಲ್ಮಾನ್ ಖಾನ್ಗೆ ಇದೀಗ ತಾತ್ಕಾಲಿಕ ವಿಮೋಚನೆ ಲಭಿಸಿದೆ...
ಮುಂಬೈ: 2002ರ ಗುದ್ದೋಡು ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸಲ್ಮಾನ್ ಖಾನ್ಗೆ ಇದೀಗ ತಾತ್ಕಾಲಿಕ ವಿಮೋಚನೆ ಲಭಿಸಿದೆ.
ಸೋಮವಾರ ಮುಂಬೈ ಸೆಷನ್ ಕೋರ್ಟ್ನಲ್ಲಿ ವಿಚಾರಣೆ ನಡೆದಿದ್ದು, ಶನಿವಾರ ರಾತ್ರಿ ಅಮೆರಿಕದಿಂದ ವಾಪಸ್ ಆಗಿದ್ದ ಸಲ್ಮಾನ್ ವಿಚಾರಣೆಗೆ ಗೈರು ಹಾಜರಾಗಿದ್ದಾರೆ.
ಸಲ್ಮಾನ್ ಖಾನ್ಗೆ ಸಮನ್ಸ್ ಲಭಿಸದೇ ಇರುವ ಕಾರಣ ಅವರು ಕೋರ್ಟ್ಗೆ ಹಾಜರಾಗಿಲ್ಲ ಎಂದು ಬಲ್ಲಮೂಲಗಳು ಹೇಳಿವೆ.
ಏತನ್ಮಧ್ಯೆ, ಸೆಷನ್ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಏಪ್ರಿಲ್ 08ಕ್ಕೆ ಮುಂದೂಡಿದೆ.
ಈ ಹಿಂದೆ ಮಾರ್ಚ್ 11ಕ್ಕೆ ಸೆಷನ್ ಕೋರ್ಟ್ಗೆ ಹಾಜರಾಗುವಂತೆ ಸಲ್ಮಾನ್ಗೆ ಆದೇಶಿಸಿದ್ದರೂ, ಅವರು ಗೈರು ಹಾಜರಾಗಿದ್ದರು. ಸಲ್ಮಾನ್ರ ಗೈರು ಹಾಜರಿಯಿಂದಾಗಿ ಕೇಸಿನ ವಿಚಾರಣೆ ಮುಂದೂಡಲಾಗಿತ್ತು.
ಏನಿದು ಪ್ರಕರಣ?: 2002, ಸೆಪ್ಟಂಬರ್ 28ರಂದು ಸಲ್ಮಾನ್ ತನ್ನ ಕಾರನ್ನು ಫುಟ್ಪಾತ್ ಮೇಲೆ ಓಡಿಸಿ ಒಬ್ಬನ ಸಾವಿಗೆ ಕಾರಣರಾಗಿದ್ದರು. ಈ ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದರು.
ನಿರ್ಲ್ಯಕ್ಷದಿಂದಾಗಿ ವ್ಯಕ್ತಿಯನ್ನು ಸಾವಿಗೆ ನೂಕಿದ ಆರೋಪ ಸಲ್ಮಾನ್ ಖಾನ್ ಮೇಲಿದ್ದು, ಭಾರತೀಯ ದಂಡ ಸಂಹಿತೆ ಪರಿಚ್ಛೇದ 304 ಎ ಅಡಿಯಲ್ಲಿ ಕೇಸು ದಾಖಲಿಸಲಾಗಿತ್ತು. ಆರೋಪ ಸಾಬೀತಾದರೆ ಆರೋಪಿಗೆ ಕನಿಷ್ಠ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ.