ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಗ್ಯಾಂಗ್‌ರೇಪ್ ಪ್ರಕರಣ: ಆರೋಪಿ ಮುಖೇಶ್ ಆಸ್ಪತ್ರೆಗೆ ದಾಖಲು

Mainashree
Updated On : 25 Mar 2013, 7:20 am

ನವದೆಹಲಿ: ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿದ್ದ ಆರೋಪಿ ಮುಖೇಶ್ ಎದೆ ನೋವಿನಿಂದ ಬಳಲುತ್ತಿದ್ದ ಹಿನ್ನಲೆಯಲ್ಲಿ ಸೋಮವಾರ ಸ್ಥಳಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜೈಲಿನಲ್ಲಿ ಮೃತಪಟ್ಟ ರಾಮಸಿಂಗ್ನ ಸಹೋದರ ಮುಖೇಶ್ ಕೂಡ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ.

ವಿಚಾರಣೆಗಾಗಿ ತಿಹಾರ್ ಜೈಲಿನಿಂದ ಸಾಕೇತ್ ನ್ಯಾಯಾಲಯಕ್ಕೆ ಕರೆದೊಯ್ಯಬೇಕಾದರೆ ಮುಖೇಶ್ ಎದೆ ನೋವು ಎಂದು ಹೇಳಿದ ಕಾರಣ ಆತನನ್ನು ಸಾಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮುಖೇಶ್ ಆಸ್ರತ್ರೆಗೆ ದಾಖಲಾದ ಹಿನ್ನಲೆಯಲ್ಲಿ ಇಂದು ನಡೆಯಬೇಕಿದ್ದ ಗ್ಯಾಂಗ್ರೇಪ್ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಮೂಂದೂಡಿದೆ.

ಮುಖೇಶ್ನನ್ನು ಆಸ್ಪತ್ರೆಗೆ ದಾಖಲಿಸಿರುವುದು ಅನುಮಾನಕ್ಕೆ ಎಡೆಮಾಡಿಕ್ಕೊಡುತ್ತಿದೆ. ಜೈಲಿನಲ್ಲಿ ಏನೋ ನಡೆಯುತ್ತಿದೆ. ಆದ್ದರಿಂದ ತಮ್ಮ ಕಕ್ಷಿದಾರರ ಜೊತೆ ಮಾತನಾಡುಲು ಅವಕಾಶ ಕಲ್ಪಿಸಬೇಕು. ಜೈಲು ಅಧಿಕಾರಿಗಳು ನಿಯೋಜಿಸಿರುವಂತಹ ಪೊಲೀಸರನ್ನು ಮತ್ತು ವೈದ್ಯರನ್ನು ತಾವು ನಂಬುವುದಿಲ್ಲ. ಆದ್ದರಿಂದ ಪ್ರತಿಷ್ಟಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವಂತೆ ಅನುಮತಿ ನೀಡಬೇಕು ಎಂದು ಮುಖೇಶ್ ಪರ ವಕೀಲರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

ವೈದ್ಯ.ರು ಮುಖೇಶ್ ಆರೋಗ್ಯದ ಬಗ್ಗೆ ನೀಡುವ ನಿರ್ದೇಶನದ ಮೇರೆಗೆ ಕ್ರಮಕೈಗೊಳ್ಳುವಂತೆ ಸೂಚಿಸಲಾಗುವುದು. ವೈದ್ಯರು ಮುಖೇಶ್ ಆರೋಗ್ಯವಾಗಿದ್ದಾರೆ ಎಂದು ದೃಢಪಡಿಸಿದ ಮೇಲೆ ವಿಚಾರಣೆಗೆ ಹಾಜರಾಗಲಿ ಎಂದು ನ್ಯಾಯಾಲಯ ಹೇಳಿದೆ.

ಇನ್ನುಳಿದ ಮೂವರು ಆರೋಪಿಗಳಾದ ಅಕ್ಷಯ್ ಸಿಂಗ್, ಪವನ್ ಗುಪ್ತಾ ಮತ್ತು ವಿನಯ್ ಶರ್ಮಾ ವಿಚಾರಣೆಗೆ ಹಾಜರಾಗಬೇಕು ಎಂದು ಆದೇಶಿದೆ.

ಡಿಸೆಂಬರ್ 16 ರಂದು ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಮೇಲೆ ಆರು ಜನ ದುಷ್ಕರ್ಮಿಗಳು ಚಲಿಸುತ್ತಿದ್ದ ಬಸ್ಸಿನಲ್ಲಿ ಸಾಮೂಹಿಕ ಅತ್ಯಾಚಾರವೆಸಗಿ ಹಲ್ಲೆ ಮಾಡಿದ್ದರು. ಕೆಲವು ದಿನಗಳ ನಂತರ ಯುವತಿ ಸಾವನ್ನಪ್ಪಿದ್ದಳು. ಅತ್ಯಾಚಾರವೆಸಗಿದ್ದ ಆರು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ದೆಹಲಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಬಂಧಿತಾರಾಗಿದ್ದ ಆರೋಪಿಗಳಲ್ಲಿ ಮುಖೇಶ್ ಸಹೋದರ ರಾಮ್ ಸಿಂಗ್ ಕಳೆದ ತಿಂಗಳು ತಿಹಾರ್ ಕೇಂದ್ರ ಜೈಲಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement