ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನಿಲುವು ಬದಲಿಸಲ್ಲ: ಡಿಎಂಕೆ

ಯುಪಿಎ ಸರ್ಕಾರದಿಂದ ಬೆಂಬಲ ವಾಪಸ್ ತೆಗೆದುಕೊಂಡಿರುವ ಡಿಎಂಕೆ ತಮ್ಮ ನಿಲುವು ಬದಲಾಯಿಸುವುದಿಲ್ಲ ಎಂದು ಹೇಳಿದೆ...

Rashmi Kasaragodu
Updated On : 25 Mar 2013, 2:05 am

ಚೆನ್ನೈ/ನವದೆಹಲಿ: ಯುಪಿಎ ಸರ್ಕಾರದಿಂದ ಬೆಂಬಲ ವಾಪಸ್ ತೆಗೆದುಕೊಂಡಿರುವ ಡಿಎಂಕೆ ತಮ್ಮ ನಿಲುವು ಬದಲಾಯಿಸುವುದಿಲ್ಲ ಎಂದು ಹೇಳಿದೆ. ತಮ್ಮ ಪಕ್ಷ ಯಾವುದೇ ಕಾರಣಕ್ಕೂ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದೊಂದಿಗೆ ನಂಟು ಮುಂದುವರಿಸುವುದಿಲ್ಲ ಎಂದು ಡಿಎಂಕೆ ಹೇಳಿದೆ.

ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಡಿಎಂಕೆ ನಾಯಕ ತಿರುಚ್ಚಿ ಶಿವ, "ನಮ್ಮ ಪಕ್ಷ ಯುಪಿಎಗೆ ಬಾಹ್ಯ ಬೆಂಬಲ ನೀಡಲು ಇಚ್ಛಿಸುವುದಿಲ್ಲ" ಎಂದು ಹೇಳಿದ್ದಾರೆ.

ಸೋಮವಾರ ಡಿಎಂಕೆ ಪಕ್ಷದ ಕಾರ್ಯಕಾರೀ ಸಭೆ ಸೇರಿದ್ದು, ಮುಂದಿನ ಕಾರ್ಯಚಟುವಟಿಕೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.

ಈ ಸಭೆಗೆ ಪಕ್ಷದ ಮುಖ್ಯಸ್ಥ ಕರುಣಾನಿಧಿಯವರ ಪುತ್ರ ಮಾಜಿ ಕೇಂದ್ರ ಸಚಿವ ಎಂ.ಕೆ ಅಳಗಿರಿ ಗೈರು ಹಾಜರಾಗಿದ್ದಾರೆ.

ಶ್ರೀಲಂಕಾ ತಮಿಳರ ವಿಷಯದಲ್ಲಿ ಯುಪಿಎ ಸರ್ಕಾರದಿಂದ ಬೆಂಬಲ ವಾಪಸ್ ಪಡೆದುಕೊಂಡಿರುವ ಬಗ್ಗೆ ಅಳಗಿರಿ ಅವರಿಗೆ ಅಸಮಧಾನ ಇದ್ದಿದ್ದು, ಈ ಕಾರಣದಿಂದಾಗಿ ಸಭೆಗೆ ಗೈರು ಹಾಜರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement