ಸಂಜಯ್ ದತ್ ಪರ ಮಮತ ದನಿ
ಪಶ್ಚಿಮ ಬಂಗಾಳ: ಬಾಲಿವುಡ್ ನಟ ಸಂಜಯ್ ದತ್ ಬಗ್ಗೆ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಹೇಳಿಕೆ ನೀಡಿದ ಬೆನ್ನಲ್ಲೇ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಂಜಯ್ ಪರ ದನಿ ಎತ್ತಿದ್ದಾರೆ.
ಈಗಾಗಲೇ ಸಂಜಯ್ ತಾನು ಮಾಡಿರುವ ತಪ್ಪಿಗೆ ಸಾಕಷ್ಟು ಶಿಕ್ಷೆ ಅನುಭನಿಸಿದ್ದಾರೆ ಎಂದು ಮಮತಾ ಬ್ಯಾನರ್ಜಿ ಸೋಮವಾರ ಫೇಸ್‌ಬುಕ್‌ನಲ್ಲಿ ಹೇಳಿಕೊಂಡಿದ್ದಾರೆ.
ಸಂಜಯ್ ತಮ್ಮ ತಪ್ಪಿಗೆ ಪ್ರಾಯಶ್ಚಿತ ಮಾಡಿಕೊಂಡಿದ್ದು, ವೃತ್ತಿ ಜೀವನದತ್ತ ಹೆಜ್ಜೆ ಹಾಕಿದ್ದಾರೆ ಎಂದ ಅವರು, ಸಂಜಯ್‌ರ ಮುಂದಿನ ಜೀವನ ನೆಮ್ಮದಿ ಹಾಗೂ ಶಾಂತಿಯುತವಾಗಿ ಇರಲಿ ಎಂದು ಎಲ್ಲರು ಪ್ರಾರ್ಥಿಸಿ ಎಂದು ಮಮತಾ ಮನವಿ ಮಾಡಿದ್ದಾರೆ.