ಸಂಜಯ್ ದತ್ ಮುಗ್ಧ: ದಿಗ್ವಿಜಯ್ ಸಿಂಗ್
ನವದೆಹಲಿ: 1993 ಮುಂಬೈ ಸರಣಿ ಸ್ಪೋಟ ಪ್ರಕರಣದಲ್ಲಿ 5 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಬಾಲಿವುಡ್ ನಟ ಸಂಜಯ್ ದತ್ ಪರ ಮತ್ತೆ ಬ್ಯಾಟಿಂಗ್ ಮಾಡಿರುವ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್, ಸಂಜಯ್ ಒಬ್ಬ ಮುಗ್ಧ ಎಂದು ಸೋಮವಾರ ಹೇಳಿದ್ದಾರೆ.
ನಿನ್ನೆಯಷ್ಟೆ ಸಂಜಯ್ ಪರ ಮಾತನಾಡಿದ್ದ ಅವರು, ಯುವಕನಾಗಿದ್ದಾಗ ತಪ್ಪು ಮಾಡಿದ್ರು. ಆದರೆ ಆತ ಉಗ್ರಗಾಮಿಯಲ್ಲ. ಮಾಡಿದ ತಪ್ಪಿಗಾಗಿ ಹೀಗಾಗಲೇ ಸಾಕಷ್ಟು ಶಿಕ್ಷೆ ಅನುಭವಿಸಿದ್ದಾರೆ ಎಂದು ಹೇಳಿದ್ದರು.
ಇಂದು ಮತ್ತೆ ಸಂಜಯ್ ಪರ ಹೇಳಿಕೆ ನೀಡಿದ ಅವರು, ಸಂಜಯ್ ಕೇವಲ ಮೂರ್ಖತನದ ಕೆಲಸ ಮಾಡಿದ್ದಾರಷ್ಟೇ, ಅದ್ದಕ್ಕಾಗಿ ಅವರನ್ನು ಉಗ್ರ ಅಫ್ಜಲ್ ಗುರುಗೆ ಹೋಲಿಕೆ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.