ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸಂತೋಷ್ ಹೆಗ್ಡೆ ಹೇಳಿಕೆಗೆ ಗೋವಾ ಗಣಿಗಾರರ ಖಂಡನೆ

Mainashree
Updated On : 25 Mar 2013, 5:51 am

ಪಣಜಿ: ಗೋವಾ ಅಕ್ರಮ ಗಣಿಕಾರಿಕೆ ಭೂಗತ ಚಟುವಟಿಕೆಗೆ ಸಮ ಎಂದು ವ್ಯಂಗ್ಯವಾಡಿರುವ ಕರ್ನಾಟಕ ಮಾಜಿ ಲೋಕಾಯುಕ್ತ ನಿವೃತ್ತ ನ್ಯಾಯಾಮೂರ್ತಿ ಸಂತೋಷ್ ಹೆಗ್ಡೆ ಅವರ ಹೇಳಿಕೆಯನ್ನು ಗೋವಾ ಗಣಿ ಮಾಲಿಕರು ಸೋಮವಾರ ಖಂಡಿಸಿದ್ದಾರೆ.

ಸಂತೋಷ್ ಹೆಡ್ಗೆ ಅವರು, ಭೂಗತ ಜಗತ್ತಿನ ದಾವುದ್ ಇಬ್ರಾಹಿಂ ಅವರ ಚಟುವಟಿಕೆಗೆ ಗೋವಾ ಗಣಿಗಾರರನ್ನು ಹೋಲಿಸಿರುವುದು ಸರಿಯಲ್ಲ ಎಂದು ಗೋವಾ ಮೈನಿಂಗ್ ಪೀಪಲ್ಸ್ ಫ್ರಂಟ್(ಜಿಎಂಪಿಎಫ್) ಸಮಾವೇಶಕ ಸುಹಾಸ್ ನಾಯ್ಕ್ ಹೇಳಿದ್ದಾರೆ.

ಗೋವಾದಲ್ಲಿ ಗಣಿಗಾರಿಕೆ ಮಾಡುತ್ತಿದ್ದ ಕಂಪನಿಗಳ ಒಕ್ಕೂಟ ಜಿಎಂಪಿಎಫ್ ಆಗಿದೆ. ಕಳೆದ ವರ್ಷ ಸುಪ್ರೀಂ ಕೋರ್ಟ್ ಈ ಕಂಪನಿಗಳಿಗೆ ಗಣಿಗಾರಿಕೆ ಮಾಡದಂತೆ ಆದೇಶಿಸಿ, ಮದ್ಯಂತರ ನಿಷೇಧಾಜ್ಞೆ ಜಾರಿಗೊಳಿಸಿತ್ತು.

ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿ ನಿಷೇಧಾಜ್ಞೆಗೆ ಒಳಗಾಗಿರುವ ಕಂಪನಿಗಳಿಗೆ ಪರಿಹಾರ ನೀಡಬಾರದು. ಈ ಕಂಪನಿಗಳು ಭೂಗತ ಚಟುವಟಿಕೆ ನಡೆಸುತ್ತಿದ್ದಂತೆ ಎಂದು ಸಂತೋಷ್ ಹೆಡ್ಗೆ ಟೀಕಿಸಿದ್ದರು.

ಗಣಿ ಕಂಪನಿಗಳಿಗೆ ಜಾರಿಗೊಳಿಸಿರುವ ನಿಷೇಧಾಜ್ಞೆಯಿಂದ ಅನೇಕ ಕೂಲಿಕಾರ್ಮಿಕರು ಉಪವಾಸದಲ್ಲಿದ್ದಾರೆ. ನಾವು ಬದುಕುವುದಕ್ಕೆ ದುಡಿಯುತ್ತಿದ್ದೇವೆ. ಹೆಗ್ಡೆ ಅವರು ತಮ್ಮನ್ನು ದಾವುದ್‌ಗೆ ಹೋಲಿಸಿವುದಾದರೇ ಅವರ ಪ್ರಕಾರ, ನಾವು ಸಮಾಜಕ್ಕೆ ಬೇಕಾಗಿಲ್ಲ ಎಂದರ್ಥ ಎಂದು ನಾಯ್ಕ್ ವಿಷಾಧಿಸಿದ್ದಾರೆ.

ಗಣಿಗಾರಿಕೆಗೆ ಅನುಮತಿ ನೀಡುವಂತೆ ಒತ್ತಾಯಿಸಿ ಆಜಾದ್ ಮೈದಾನದಲ್ಲಿ ಕೈಗೊಂಡಿದ್ದ ಪ್ರತಿಭಟನೆಯನ್ನು ಹಿಂತೆಗೆದುಕೊಂಡ ಜಿಎಂಪಿಎಫ್, ಏಪ್ರಿಲ್ 15-16 ರಂದು ನವದೆಹಲಿಯ ಜಂತರ್‌ಮಂತರ್‌ನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement