ಹುಡುಗಿಯನ್ನು ಚುಡಾಯಿಸಿದ ಪೇದೆ ಬಂಧನ
ಮುಝಾಫ್ನಗರ್: ದಲಿತ ಹುಡುಗಿಯನ್ನು ಚುಡಾಯಿಸಿದ ಪೊಲೀಸ್ ಪೇದೆಯನ್ನು ಸೋಮವಾರ ಬಂಧಿಸಿಲಾಗಿದೆ.
ಸಫ್ರಾಝ್ ಬಂಧಿತ ಆರೋಪಿ. ಮೀರನ್ಪುರ್ ಪಟ್ಟಣದಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ದಲಿತ ಹುಡುಗಿಯನ್ನು ಭಾನುವಾರ ಪೊಲೀಸ್ ಪೇದೆ ಚುಡಾಯಿಸಿದ್ದಾರೆ.
ಆತನ ಮೇಲೆ ದೂರ ಬಂದ ಹಿನ್ನಲೆಯಲ್ಲಿ ಪೊಲೀಸರು ಪೇದೆಯನ್ನು ಬಂಧಿಸಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಸ್ಥಳೀಯ ನ್ಯಾಯಾಲಯ ಆದೇಶಿಸಿದೆ.
ಹುಡುಗಿಯನ್ನು ಚುಡಾಯಿಸಿದ್ದಕ್ಕೆ ಪೇದೆಯನ್ನು ಸ್ಥಳಿಯ ಸಾರ್ವಜನಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಪೇದೆಯ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ಎಸ್ಸಿ/ಎಸ್ಟಿ) ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.