ಎನ್‌ಇಟಿ ಪರೀಕ್ಷಾ ಫಲಿತಾಂಶ ಪ್ರಕಟ
ನವದೆಹಲಿ: ಡಿಸೆಂಬರ್ 2012ರಲ್ಲಿ ಯುಜಿಸಿ ನಡೆಸಿದ ರಾಷ್ಟ್ರೀಯ ಅರ್ಹತಾ ಪರೀಕ್ಷೆ(ಎನ್‌ಇಟಿ)ಯ ಫಲಿತಾಂಶ ಸೋಮವಾರ ರಾತ್ರಿ ಪ್ರಕಟಗೊಂಡಿದ್ದು, ಪರೀಕ್ಷೆ ಬರೆದ ಒಟ್ಟು 7.8 ಲಕ್ಷ ಅಭ್ಯರ್ಥಿಗಳ ಪೈಕಿ 39,226 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ.
ಯುಜಿಸಿ ವರದಿ ಪ್ರಕಾರ, 39,226 ಅಭ್ಯರ್ಥಿಗಳು ಉಪನ್ಯಾಸಕ ಕ್ಷೇತ್ರದಲ್ಲಿ ಅರ್ಹತೆ ಪಡೆದಿದ್ದಾರೆ. 3669 ಅಭ್ಯರ್ಥಿಗಳು ಕಿರಿಯ ಸಂಶೋಧನ ಸಹಭಾಗಿತ್ವ (ಜೆಆರ್‌ಫ್)ಕ್ಷೇತ್ರಕ್ಕೆ ಅರ್ಹತೆ ಪಡೆದಿದ್ದಾರೆ.
ಡಿಸೆಂಬರ್ 2012ರಲ್ಲಿ ರಾಷ್ಟ್ಟ್ರವ್ಯಾಪ್ತಿ 77 ಪರೀಕ್ಷಾ ಕೇಂದ್ರಗಳಲ್ಲಿ, 78 ವಿಷಯಗಳಿಗೆ ಸಂಬಂಧಿಸಿದ ಪರೀಕ್ಷೆ ನಡೆದಿತ್ತು.