ಚಲಿಸುವ ಕಾರಲ್ಲಿ ಯುವತಿ ಮೇಲೆ ಗ್ಯಾಂಗ್ರೇಪ್
ಚಲಿಸುವ ಕಾರಿನಲ್ಲಿ ನಾಲ್ವರು ಯುವಕರು 20ರ ಹರೆಯದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣ ವರದಿ...
ಅಮೃತ್ಸರ: ಚಲಿಸುವ ಕಾರಿನಲ್ಲಿ ನಾಲ್ವರು ಯುವಕರು 20ರ ಹರೆಯದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣ ವರದಿಯಾಗಿದೆ.
ಕಳೆದ ರಾತ್ರಿ ತನ್ನ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ಬಸ್ ಸ್ಟಾಪ್ ಬಳಿ ಇಬ್ಬರು ಯುವಕರು ಯುವತಿಯನ್ನು ಕಾರಿನಲ್ಲಿ ಅಪಹರಣಗೈದಿದ್ದಾರೆ.
ಕಾರು ತುಸು ದೂರ ಸಂಚರಿಸಿದ ನಂತರ ಇನ್ನಿಬ್ಬರು ಯುವಕರು ಕಾರಿಗೆ ಹತ್ತಿದ್ದಾರೆ. ಕಾರಿನಲ್ಲಿ ಗಟ್ಟಿಯಾಗಿ ಮ್ಯೂಸಿಕ್ ಪ್ಲೇ ಮಾಡಿದ್ದು, ಕಾರು ಚಲಿಸುತ್ತಿದ್ದಂತೆ ನಾಲ್ವರು ಯುವಕರು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಯುವತಿ ಹೇಳಿದ್ದಾಳೆ.
ಅತ್ಯಾಚಾರ ಮಾಡಿದ ನಂತರ ಆಕೆಯನ್ನು ಕಂಟೋನ್ಮೆಂಟ್ ಪ್ರದೇಶದಲ್ಲಿ ಎಸೆದಿರುವುದಾಗಿ ಯುವತಿ ದೂರಿದ್ದಾಳೆ.
ಅತ್ಯಾಚಾರಕ್ಕೊಳಗಾದ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಯುವತಿಯ ಹೇಳಿಕೆಯಂತೆ ಪೊಲೀಸರು ಕೇಸು ಅತ್ಯಾಚಾರಿಗಳ ವಿರುದ್ಧ ಕೇಸು ದಾಖಲಿಸಿದ್ದಾರೆ. ಅದರಲ್ಲಿ ಇಬ್ಬರು ಅತ್ಯಾಚಾರಿಗಳ ಗುರುತು ಪತ್ತೆಯಾಗಿದ್ದು, ಇವರನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.