ದೆಹಲಿಯಲ್ಲಿ 'ಕೈ' ಟಿಕೆಟ್ಗಾಗಿ ಬೇಳೂರು ಕಸರತ್ತು
ಕಾಂಗ್ರೆಸ್ನ ಟಿಕೆಟ್ ಆಕಾಂಕ್ಷಿಗಳು ಈಗ ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ಟಿಕೆಟ್ಗಾಗಿ ಕಾಂಗ್ರೆಸ್ನ ಕದ ತಟ್ಟುತ್ತಿರುವ ಬಿಜೆಪಿ ಶಾಸಕ ..
ನವದೆಹಲಿ: ಕಾಂಗ್ರೆಸ್ನ ಟಿಕೆಟ್ ಆಕಾಂಕ್ಷಿಗಳು ಈಗ ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ಟಿಕೆಟ್ಗಾಗಿ ಕಾಂಗ್ರೆಸ್ನ ಕದ ತಟ್ಟುತ್ತಿರುವ ಬಿಜೆಪಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ದೆಹಲಿಯಲ್ಲಿ ಟಿಕೆಟ್ಗಾಗಿ ಭಾರಿ ಕಸರತ್ತು ನಡೆಸಿದ್ದಾರೆ.
ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಕಾಂಗೋಡ ತಿಮ್ಮಪ್ಪ ಅವರು ಪ್ರಮುಖ ಆಕಾಂಕ್ಷಿಯಾಗಿರುವುದರಿಂದ, ಬೇಳೂರು ಗೋಪಾಲಕೃಷ್ಣ ಅವರಿಗೆ ಟಿಕೆಟ್ ಸಿಗುವುದು ಅಸಾಧ್ಯ ಎನ್ನಲಾಗುತ್ತಿದೆ.
ಈ ಬಗ್ಗೆ ರಾಷ್ಟ್ರ ರಾಜಧಾನಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೇಳೂರು, ರಾಜಕೀಯ ಚರ್ಚಿಸುವ ಸಂಬಂಧ ತಾವು ದೆಹಲಿಗೆ ಆಗಮಿಸಿದ್ದು, ಟಿಕೆಟ್ಗಾಗಿ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುತ್ತಿರುವುದಾಗಿ ಹೇಳಿದ್ದಾರೆ. ಅಲ್ಲದೆ ಒಂದು ವೇಳೆ ಕಾಂಗ್ರೆಸ್ನಿಂದ ತಮಗೆ ಟಿಕೆಟ್ ಸಿಗದಿದ್ದರೆ, ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತೇನೆ. ಆದರೆಯಾವುದೇ ಪಕ್ಷದಿಂದ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.